ಬೆಂಗಳೂರು: ಸರ್ಕಾರಿ ಅಧಿಕಾರಿಯೋರ್ವರು ಸರ್ಕಾರಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಅಕ್ರಮ ಎಸಗುತ್ತಿದ್ದಾರೆ ಎಂದು ಶಾಸಕರೋರ್ವರು ಆರೋಪ ಮಾಡಿದ್ದಾರೆ. ಶಾಸಕ ರಮೇಶ್ ಬಂಡಿ ಸಿದ್ದೇಗೌಡ ಅವರು, ಸರ್ಕಾರಿ ಅಧಿಕಾರಿ ದಾಖಲೆಗಳನ್ನು ದಿನಬೆಳಗೊದರೊಳಗೆ ತಿದ್ದುಪಡಿ ಮಾಡಿ ಅಕ್ರಮವೆಸಗುತ್ತಿದ್ದಾರೆ ಎಂದ ಅವರು, ಹುಲಿಕೆರೆ ಗ್ರಾಮದ ೩ ಎಕರೆ ಕೆರೆ ಜಾಗವನ್ನು ಮುಚ್ಚಲಾಗಿದೆ ಎಂದು ಸಹಾ ಅವರು ದೂರಿದ್ದಾರೆ.ತಹಶೀಲ್ದಾರ್ ಕೋರ್ಟ್ನಲ್ಲಿ ವಜಾ ಆಗುವ ಪ್ರಕರಣಗಳನ್ನು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಆದೇಶಿಸಲಾಗುತ್ತಿದೆ ಎಂದು ಅಧಿಕಾರಿ ಹೆಸರನ್ನು ನೇರವಾಗಿ ಪ್ರಸ್ತಾಪಿಸಿ ಆರೋಪಿಸಿದ್ದಾರೆ. ಇದನ್ನು ಪ್ರಶ್ನಿಸಿದರೆ ಸಚಿವರು ಹೇಳಿದ್ದಾರೆ ಎಂದು ಸಚಿವರ ಮೇಲೆ ದೂರುತ್ತಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ತಾವು ವಿಧಾನಸಭೆಯಲ್ಲಿ ಪ್ರಶ್ನಿಸಿರುವುದಾಗಿ ರಮೇಶ್ ಬಂಡಿ ಸಿದ್ದೇಗೌಡ ತಿಳಿಸಿದ್ದಾರೆ.
ಈಗಾಗಲೇ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದೇನೆ. ಇಂದು ಅಥವಾ ನಾಳೆ ಇದರ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.



