ಆನೇಕಲ್: ಆನೇಕಲ್ ಪಟ್ಟಣದ ಶ್ರೀ ಸಂಕುಲ ಶಿಕ್ಷಣ ವಿದ್ಯಾ ಸಂಸ್ಥೆಯಾದ ಅಕ್ಷರ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಮಟ್ಟದ ಪಿಯು ಇಂಟರ್ ಕಾಲೇಜಿನ ಕ್ರೀಡಾಕೂಟ ಫೋಕಸ್ 2023-24ನೇ ಸಾಲಿನ ಬಾಲಕಿಯರ ಥ್ರೊಬಾಲ್ ಕ್ರೀಡಾಕೂಟವನ್ನು ಆನೇಕಲ್ ಪಟ್ಟಣದ ಬಿದರಗೆರೆ ರಸ್ತೆಯಲ್ಲಿರುವ ಅಕ್ಷರ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿತ್ತು.
ಅಕ್ಷರ ಕಾಲೇಜಿನ ಸಂಸ್ಥಾಪಕರಾದ ನಾಗರಾಜು ರವರು ಮಾತನಾಡಿ, 2019 ರಿಂದ ಕ್ರೀಡಾಕೂಟವನ್ನು ಆಯೋಜಿಸುತ ಬಂದಿದ್ದೇವೆ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಅತಿ ಮುಖ್ಯವಾದುದು, ನಮ್ಮ ಕಾಲೇಜಿನಲ್ಲಿ ಮೊದಲ ಬ್ಯಾಚ್ ಆದ 2019ರ ವಿದ್ಯಾರ್ಥಿಗಳು ಫೋಕಸ್ ಎಂಬ ಹೆಸರಿನ ಕ್ರೀಡಾ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು ಅದನ್ನು ನಮ್ಮ ವಿದ್ಯಾ ಸಂಸ್ಥೆಯು ಮುಂದುವರಿಸಿಕೊಂಡು ಬರುತ್ತಿದೆ ಎಂದರು.
ಇನ್ನು ಈ ಕ್ರೀಡಾಕೂಟದಲ್ಲಿ ಮಕ್ಕಳಿಗೆ ಉತ್ತೇಜನ ನೀಡಲು ಈ ಕ್ರೀಡೆಯಲ್ಲಿ ಮೊದಲನೇ ಬಹುಮಾನ ಪಡೆದ ತಂಡಕ್ಕೆ ಸಂಸ್ಥೆಯ ಪರವಾಗಿ ಐದು ಸಾವಿರ, ಎರಡನೇ ಬಹುಮಾನ ಪಡೆದ ತಂಡಕ್ಕೆ 4000 ನಗದು ಬಹುಮಾನವನ್ನು ನೀಡಲಾಗುವುದು ಎಂದರು.
ಒಂದು ದಿನದ ಬಾಲಕಿಯರ ಥ್ರೊಬಾಲ್ ಕ್ರೀಡಾಕೂಟದಲ್ಲಿ 8 ಕ್ಕೂ ಹೆಚ್ಚು ತಂಡಗಳು ಭಾಗಿಯಾಗಿದ್ದು ಅದರಲ್ಲಿ ಪ್ರಥಮ ಬಹುಮಾನ ಅಕ್ಷರ ಕಾಲೇಜಿನ ಬಾಲಕಿಯರು ಪಡೆದುಕೊಂಡರೆ, ದ್ವಿತೀಯ ಬಹುಮಾನ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರು.
ಆನೇಕಲ್ ಪುರಸಭೆ ಅಧ್ಯಕ್ಷ ಎನ್ಎಸ್ ಪದ್ಮನಾಭ, ಆನೇಕಲ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ, ಅಕ್ಷರ ಕಾಲೇಜಿನ ಪ್ರಾಂಶುಪಾಲರಾದ ವೀಣಾ ನಾಗರಾಜ, ಪುರಸಭಾ ಸದಸ್ಯರಾದ ರಾಜೇಂದ್ರ ಪ್ರಸಾದ್, ಲಾಯರ್ ಬಿ. ಲೋಕೇಶ, ಲಾಯರ್ ದಿವ್ಯ ಶ್ರೀ, ಸಮಾಜ ಸೆವಕರಾದ ಆನೇಕಲ್ ರವಿ, ಅಕ್ಷರ ಕಾಲೇಜಿನ ಸಿಬ್ಬಂದಿ ವರ್ಗ, ಕ್ರೀಡಾ ಪ್ರೋತ್ಸಾಹಕರು, ಪೋಷಕರು ಹಾಗೂ ಮತ್ತಿತ್ತರರು ಹಾಜರಿದ್ದರು.