ಕನ್ನಡ ಸಾರಸ್ವತ ಲೋಕದ ಬಹುಮುಖ ಪ್ರತಿಭೆಯ ಧೀಮಂತ ವ್ಯಕ್ತಿ ಡಾ.ಪೂರ್ಣಚಂದ್ರ ತೇಜಸ್ವಿ. ಅವರು ಸಾಹಿತಿ, ವಿಮರ್ಶಕ. ಪರಿಸರ ವಿಜ್ಞಾನಿ, ಪ್ರಾಣಿ ಪ್ರಿಯ, ಪಕ್ಷಿಪ್ರಿಯ ಅದ್ಭುತ ಛಾಯಾಗ್ರಹಕ, ನಿಸರ್ಗದೊಂದಿಗೆ ಬದುಕನ್ನು ಬೆಸೆದುಕೂಂಡು ಸಂಶೋಧನೆ ಮತ್ತು ಸಮರ್ಥ ಬದುಕಿನ ಸಾಕ್ಷಿ ಪ್ರಜ್ಞೆಯಾಗಿ ಬದುಕಿದ ಚೇತನ. ಅವರ ಗೌರವಾರ್ಥ ಲಾಲ್ ಬಾಗ್ ಸಸ್ಯ ತೋಟದಲ್ಲಿ. ಪುಷ್ಪ ಪ್ರದರ್ಶನದ ವಿಸ್ಮಯ ಮೂಡಿಸಿದ್ದಾರೆ. ಆಸಕ್ತರು ಕಣ್ಣು ತುಂಬಿ ಕೊಳ್ಳಬಹುದು.



