This is the title of the web page
This is the title of the web page

ಅಂಬೇಡ್ಕರ್, ಜಗಜೀವನರಾಮ್ ಜಯಂತಿ ಆಚರಣೆ

ಹೊಸಕೋಟೆ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ: ಬಿ.ಆರ್.ಅಂಬೇಡ್ಕರ್ 132ನೇ ಜಯಂತಿ ಮತ್ತು ಬಾಬು ಜಗಜೀವನರಾಮ್‍ರವರ 115ನೇ ಜಯಂತಿ ಕಾರ್ಯಕ್ರಮ ನಡೆಯಿತು. ಮುಖ್ಯ ಭಾಷಣಕಾರರಾಗಿ ಆನೇಕಲ್‍ನ ಇತಿಹಾಸ ಉಪನ್ಯಾಸಕ ಡಾ: ವಿ.ರಾಮಕೃಷ್ಣಪ್ಪ ಮಾತನಾಡಿ ಜಗತ್ತಿನ ಅತಿದೊಡ್ಡ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‍ರವರ ಪಾತ್ರವು ಮಹತ್ತರವಾದುದಾಗಿದೆ.

ಇಂದಿನ ತುಳಿತಕ್ಕೆ ಒಳಗಾದ ಸಮುದಾಯಗಳು ಮುಖ್ಯವಾಹಿನಿಗೆ ಬರಲು ನೀಡಿದ ಕೊಡುಗೆ ಅಪಾರವಾದುದಾಗಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಅಂಬೇಡ್ಕರ್ ಪ್ರತಿಮೆಗಳನ್ನು ಹೊಂದಲು ಅವರ ಶೋಷಿತರ ಧ್ವನಿಗೆ ನಿದರ್ಶನವಾಗಿದೆ ಎಂದರು. ಸಮಾಜಶಾಸ್ತ್ರ ಉಪನ್ಯಾಸಕ ಡಾ: ದೊಡ್ಡಹನುಮಯ್ಯ ಮಾತನಾಡಿ ಬಾಬು ಜಗಜೀವನರಾಮ್ ದೇಶದ ಹಸಿರು ಕ್ರಾಂತಿಯ ಹರಿಕಾರರಾಗಿ, ದಮನಿತರ ಧ್ವನಿಯಾಗಿ, ಜನಪರವಾಗಿ ನಿಂತ ಅವರ ಸೇವೆ ಅನನ್ಯವಾದದ್ದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಡಾ: ಮುನಿನಾರಾಯಣಪ್ಪ ಮಾತನಾಡಿ ಒಂದೇ ತಿಂಗಳಲ್ಲಿ ಇಬ್ಬರು ಮಹನೀಯರ ಜಯಂತಿ ಆಚರಣೆ ಮಾಡುತ್ತಿರುವುದು ಅವರಿಗೆ ನೀಡಿದ ಗೌರವವಾಗಿದೆ. ಒಬ್ಬರು ಸಮಾನತೆಗಾಗಿ ಹೋರಾಡಿದವರಾಗಿದ್ದು ಮತ್ತೊಬ್ಬರು ಹಸಿರು ಕ್ರಾಂತಿಗಾಗಿ ತೊಡಗಿಸಿಕೊಂಡಿದ್ದು ದೇಶದ ಭದ್ರಬುನಾದಿಗೆ ಕಾರಣವಾಗಿದೆ ಎಂದರು.
ಉಪನ್ಯಾಸಕರಾದ ಡಾ: ಅಶ್ವಥನಾರಾಯಣ್, ಪ್ರೊ. ಗಾಯತ್ರಿ, ಹಿರಿಯ ಉಪನ್ಯಾಸಕರುಗಳು, ಬೋಧಕವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.