ನೆಲಮಂಗಲ: ತಾಲೂಕು ಆಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತೋತ್ಸವ ಕಾರ್ಯಕ್ರಮ ಮಾಡುವ ಮೂಲಕ ಅವರಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಆರ್.ಭಾಸ್ಕರ್‍ಪ್ರಸಾದ್ ತಿಳಿಸಿದರರು.
ನಗರದ ತಾಲೂಕು ಕಚೇರಿಯಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಡಾ.ಬಿ.ಆರ್.ಅಂಬೇ ಡ್ಕರ್ ಜಯಂತೋತ್ಸವ ಕಾರ್ಯಕ್ರಮವನ್ನು ಅಧಿಕಾರಿಗಳು ಸರಿಯಾದ ರೀತಿ ಆಯೋಜನೆ ಮಾಡದ ಹಿನ್ನಲೆ ತಾಲೂಕು ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದರು.
ತಾಲೂಕು ಆಡಳಿತ ಹಾಗೂ ಚುನಾವಣಾ ಧಿಕಾರಿಗಳು ಚುನಾವಣಾ ನೀತಿ ಸಹಿತೆ ಹೆಸರಿನಲ್ಲಿ ಜಯಂತಿ ಆಚರಣೆಗೆ ಅವಕಾಶ ನೀಡಿಲ್ಲ. ಅಂಬೇಡ್ಕರ್ ಭವನದಲ್ಲಿ ಸರ್ಕಾರದಿಂದ ನಡೆಯ ಬೇಕಾದ ಅಂಬೇಡ್ಕರ್ ಜಯಂತಿಯನ್ನು ಮಾಡದೇ ಯಾವಾಗಲು ತಾಲೂಕು ಕಚೇರಿ
ಸಭಾಂಗಣದಲ್ಲಿ ಮಾಡುತ್ತಿದ್ದು ಈ ಬಾರಿ ಸಿಬ್ಬಂ ದಿಯ ಕಚೇರಿಯಲ್ಲಿ ಆಚರಣೆ ಮಾಡಿದ್ದಾರೆ.
ಕಾಂಗ್ರೇಸ್ ಪಕ್ಷದವರ ಸಾವಿರಾರು ಮಂದಿಯನ್ನು ಸೇರಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಮೆರವಣಿಗೆ ಅವಕಾಶ ಸಂಘಟನೆಗಳಿಗೆ ನೀಡಿಲ್ಲ. ಚುನಾವಣೆ ನೀತಿ ಸಂಹಿತೆಯನ್ನು ದುರುಪಯೋಗ ಪಡಿಸಿಕೊಂಡು ರಾಜಕೀಯ ಪಕ್ಷದ ಏಜೆಂಟ್‍ಗಳಾಗಿ ಚುನಾವಣಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಚುನಾವಣಾಧಿಕಾರಿಗಳಿಗೆ ತಾಲೂಕು ಆಡಳಿತ ಹಾಗೂ ಚುನಾವಣಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.
ಸಂದರ್ಭದಲ್ಲಿ ದಲಿತಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಡವಂದ ರಾಜು, ಸಾಹಿತಿ ಕಲ್ಯಾಣಿನಾಗರಾಜು, ಮಾದಿಗ ಮಹಾಸಬಾ ಅಧ್ಯಕ್ಷ ಡಾ.ಜಿ.ಎನ್.ಕನಕರಾಜು, ಉಪಾಧ್ಯಕ್ಷ ರಾಮಾಂಜಿನಪ್ಪ, ಯುವಶಕ್ತಿ ಸಂಸ್ಥೆ ಮುಖ್ಯಸ್ಥ ಅನಂತ್‍ಕುಮಾರ್, ಮುಖಂಡ ಮಹದೇವ್, ಕೇಶವ್, ರಂಗನಾಥ್, ಮಹೇಶ್, ಉಮಾದೇವಿ ಮತ್ತಿತರರು ಉಪಸ್ಥಿತರಿದರು.
Leave a Review