ನೆಲಮಂಗಲ: ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ದೇಶಕ್ಕೆ ನೀಡಿದ ಕೊಡುಗೆಗಳು ಅಗಾಧವಾದದ್ದು. ಭಾರತದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ ಮಹಾ ನಾಯಕ ಅಂಬೇಡ್ಕರ್ ಎಂದು ಬಿಜೆಪಿ ಎಸ್ಸಿಎಸ್ಟಿ ಯುವ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ರಾಮಯ್ಯ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಶ್ರೀನಿವಾಸಪುರ ಗ್ರಾಮದಲ್ಲಿಆಯೋಜಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ಆಚರಿಸಿ ಮಾತನಾಡಿದ ಅವರುಜಾತಿ ವ್ಯವಸ್ಥೆ ಆಳವಾಗಿ ಬೇರೂರಿದ್ದ ಕಾಲಘಟ್ಟದಲ್ಲಿ ಸಾಕಷ್ಟು ನೋವು ಅವಮಾನಗಳನ್ನು ಎದುರಿಸಿ ಜಾತಿ ವ್ಯವಸ್ಥೆಯ ಭೂತವನ್ನು ಬಡಿದೋಡಿಸಿದವರೇ ಈ ಭೀಮ ರಾವ್. ಇಂದಿಗೂ ದೇಶದಲ್ಲಿರುವ ಜಾತಿ ತಾರತಮ್ಯ ಹೋಗಲಾಡಿಸಲು ಮತ್ತೆ ಅವರೇ ಬರಬೇಕು ಎಂದರು.
ಅಂದು ಇದ್ದ ಜಾತಿ ತಾರತಮ್ಯವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದಾದರೆ ಇದಕ್ಕೆ ಮೂಲ ಕಾರಣರೇ ಡಾ. ಬಿ ಆರ್ ಅಂಬೇಡ್ಕರ್. ದೇಶದ ಪ್ರತಿಯೊಬ್ಬ
ನಾಗರಿಕರಿಗೂ ಸಮಾನ ಹಕ್ಕುಗಳನ್ನು ಒದಗಿಸುವ ಸಂವಿಧಾನವನ್ನು ಅವರು ರಚಿಸಿಕೊಟ್ಟ ಧೀಮಂತ ವ್ಯಕ್ತಿಯನ್ನು ನೆನಪಿಸಿಕೊಳ್ಳಲೇ ಬೇಕು. ಹೀಗಾಗಿ ದೇಶದ ಜನರಿಗೆ ಇವರು ನೀಡಿದ ಕೊಡುಗೆಗಳನ್ನು ಸ್ಮರಿಸುವ ಕೆಲಸವನ್ನು ಜನ್ಮ ದಿನದಂದು ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಶಾಸಕ ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಯಂಟಗಾನಹಳ್ಳಿ ಪಂಚಾಯತಿ ಅಧ್ಯಕ್ಷ ರಾಹುಲ್ ಗೌಡ,ಎಸ್ ಸಿ ಮೋರ್ಚ್ ಅಧ್ಯಕ್ಷ ಉಮೇಶ್, ಶಾಂತ ಕುಮಾರಿ, ಶೋಭಾ, ದಲಿತ ಮುಖಂಡ ಸಿದ್ದರಾಜು, ಮತ್ತಿತರ ಭಾಗಿಯಾಗಿ ಶುಭ ಕೋರಿದರು.