ಬೆಂಗಳೂರು: ತಡರಾತ್ರಿ ಸುಮಾರು ೧೧. ೧೫ ಗಂಟೆಗೆ ಮೋಟರ್ ಸೈಕಲ್ ನಲ್ಲಿ ಕುಟುಂಬ ಸಮೇತರಾಗಿ ನಾಲ್ಕು ಜನ ಹೋಗುತ್ತಿರುವಾಗ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟರೆ, ಇಬ್ಬರಿಗೆ ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.
ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಡಬಲ್ ರೋಡ್ ಜಂಕ್ಷನ್ನಲ್ಲಿ ಅಪಘಾತ ಕೀಡಾಗಿ ಇಸ್ಮೆöÊಲ್(೪೦) ಮತ್ತು ಸಮೀರ್ ಭಾನು (೩೩) ಗಂಡ ಹೆಂಡತಿ ಮೃತಪಟ್ಟರೆ ಮಕ್ಕಳಾದ ರಿಯನ್ ಮತ್ತು ಸಿದಿಕ್ ರವರು ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.ಸೋಮೇಶ್ವರನಗರ ನಿವಾಸಿಗಳಾಗಿರುತ್ತಾರೆ, ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರು ಅಪಘಾತ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಕೈಗೊಂಡಿರುತ್ತಾರೆ.



