ಬೇಲೂರು, ಅರೇಹಳ್ಳಿ: ಇತ್ತೀಚಿಗೆ ಪಟ್ಟಣ ವ್ಯಾಪ್ತಿಯಲ್ಲಿ ಅಸ್ಸಾಂ ಹಾಗೂ ಇತರೆ ಹೊರ ರಾಜ್ಯಗಳ ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಸಮಾಜಘಾತಕ ಚಟುವಟಿಕೆಗಳು ಹೆಚ್ಚಾಗಿ ಪಟ್ಟಣದ ಸ್ವಾಸ್ಥ÷್ಯ ಕದಡಬಹುದೆಂಬ ಆತಂಕ ಸ್ಥಳೀಯ ಹಲವರಲ್ಲಿ ಮೂಡುತ್ತಿದ್ದಂತೆ ಇದೀಗ ಪೊಲೀಸರಿಗೆ ಸೆರೆಸಿಕ್ಕ ಅಕ್ರಮ ಗಾಂ*ಜಾ ಮಾರಾಟಗಾರನಿಂದ ದೃಢವಾಗಿರುವುದು ನಿಜ ಎನಿಸುತ್ತಿದೆ!
ಬೇಲೂರು ತಾಲೂಕಿನ ಅರೆಹಳ್ಳಿ ಹಾಗೂ ಸುತ್ತಮುತ್ತಲಿನಲ್ಲಿ ಎತೇಚ್ಚವಾಗಿ ತೋಟದ ಕೂಲಿ ಕೆಲಸ ಹಾಗೂ ಕಟ್ಟಡಗಳ ನಿರ್ಮಾಣ ಕೆಲಸ ಕಾರ್ಯಕ್ಕಾಗಿ ಅಸ್ಸಾಂ ಹಾಗೂ ಇತರೆ ಹೊರರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರ ಸಂಖ್ಯೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ! ಕಳವು ಪ್ರಕರಣಗಳು ಸಹ ಹೆಚ್ಚಾಗಿರುವುದು ಆಗಿಂದ್ದಾಗೆ ಕಂಡು ಬರುತ್ತಿದೆ! ಇವುಗಳ ನಡುವೆ ನಿನ್ನೆ ಹಗಲಿನ ಹೊತ್ತಿನಲ್ಲಿಯೇ ಪಟ್ಟಣದ ಸಂತೋಷನಗರದಲ್ಲಿ ಸುಮಾರು ಮೂರು ವರ್ಷಗಳಿಂದ ಬಾಡಿಗೆ ಮನೆ ಪಡೆದು ಟಿಂಬರ್ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಆರೋಪಿ ತಾ*ಹೀರ್ ಆಲಿ ಎಂಬಾತನು ಪಟ್ಟಣದ ಮುಖ್ಯ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಅಕ್ರಮವಾಗಿ ಸಾವಿರಾರು ಮೌಲ್ಯದ ಗಾಂ*ಜಾ ಸೊಪ್ಪನ್ನು ಮೂರ್ನಾಲ್ಕು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ, ಖಚಿತ ಮಾಹಿತಿ ಪಡೆದ ಸ್ಥಳೀಯ ಪೊಲೀಸರ ತಂಡವು ದಾಳಿ ನಡೆಸಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಜೈಲುಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.



