This is the title of the web page
This is the title of the web page

ಭಾವುಕರಾದ ಡಿಕೆಶಿ

ಬೆಂಗಳೂರು: ತಮ್ಮ ಪಕ್ಷ ಬಹುಮತಗಳಿಸಲು ಕಾರಣರಾದ ಕರ್ನಾಟಕದ ಸಮಸ್ತ ಜನತೆಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಪಕ್ಷ ಬಹುಮತ ಗಳಿಸುವ ಸಮೀಪಕ್ಕೆ ಬಂದ ಸಂದರ್ಭದಲ್ಲಿ ಮೊಟ್ಟಮೊದಲಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಭಾವುಕರಾಗಿ ಕಣ್ಣೀರು ಸುರಿಸುತ್ತ ಇದೀಗ ನಮ್ಮ ಕಾರ್ಯಕರ್ತರೆಲ್ಲ ಉತ್ಸಾಹದಲ್ಲಿದ್ದು, ಸದ್ಯಕ್ಕೆ ಬೇರೆನು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. ಪಕ್ಷದ ಗೆಲುವಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.