ಕೆ.ಆರ್.ಪುರ: ಇಂಡಿಯನ್ ರೇಸಿಂಗ್ ಫೆಸ್ಟಿವಲ್ ನ ಪ್ರಾಯೋಗಿಕ ಪ್ರದರ್ಶನವು ಮಾಹಿತಿ ಮತ್ತು ತಂತ್ರಜ್ಞಾನ ಕೇಂದ್ರದ ಹೃದಯ ಭಾಗವಾದ ವೈಟ್ ಫೀಲ್ಡ್ ನ ಸಮೀಪ ಕುಂದಲಹಳ್ಳಿಯಲ್ಲಿ ಯಶಸ್ವಿಯಾಗಿ ಜರುಗಿತು.
ಮೋಟರ್ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಎಂಟರ್ಪ್ರೈಸ್ ರೈಸಿಂಗ್ ಪ್ರಮೋಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಜೆಕೆ ಟೈರ್ ಹಾಗೂ ಮೊಬಿಲ್-1 ಟಿಎಂ ಸಹಯೋಗದಲ್ಲಿ ಐಆರ್ ಎಲ್ ಪ್ರದರ್ಶನ ಹಮ್ಮಿಕೊಂಡಿತ್ತು.ಮುಂದಿನ ದಿನಗಳಲ್ಲಿ ಶ್ರೀನಗರದಲ್ಲಿ ನಡೆಯುವ ರೈಸಿಂಗ್ ಫೆಸ್ಟಿವಲ್ ನ ಮೊದಲ ಪ್ರಾಯೋಗಿಕ ಪ್ರದರ್ಶನದಲ್ಲಿ ಯುವಕರು ನಾವೀನ್ಯತೆ ಪ್ರತಿಭೆಯ ಮೂಲಕ ವಿವಿಧ ಪರಾಕ್ರಮವನ್ನು ಪ್ರದರ್ಶಿಸಿದರು.
ಕುತೂಹಲ ನಿರೀಕ್ಷಿಸಿದ ಪ್ರದರ್ಶನದಲ್ಲಿ ರೇಸಿಂಗ್ ಪ್ರಮೋಷನ್ ಪ್ರೈವೇಟ್ ಲಿಮಿಟೆಡ್ ವಾಹನಗಳು ಮತ್ತು ಚಾಲಕರು ರೋಮಾಂಚನಕಾರಿ ಶ್ರೇಣಿಯನ್ನು ರಚಿಸಿದರು. ಈ ಆಕರ್ಷಕವಾದ ಆಕ್ಷನ್ ಇಂದ ತುಂಬಿದ ಪ್ರದರ್ಶನಕ್ಕೆ ಪ್ರೇಕ್ಷಕರು ಕಳೆದು ಹೋದರು.ಸೋಹಿಲ್ ಶಾ ಮತ್ತು ಫಾರ್ಮುಲಾ 4ರ ವೈಸ್ ಚಾಂಪಿಯನ್ ರಿಶನ್ ರಾಜೀವ್ ಎಂಬಿಬ್ಬರು ಪ್ರತಿಭಾನ್ವಿತ ಉದಯೋನ್ಮುಖ ಮೋಟಾರ್ ಸ್ಪೋರ್ಟ್ಸ್ ಪ್ರತಿಭೆಗಳು ಉತ್ತಮ ಪ್ರದರ್ಶನ ನೀಡಿದರು.
ಎಕ್ಸಾನ್ ಮೊಬಿಲ್ ಲೂಬ್ರಿಕೆಂಟ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ವಿಪಿನ್ ರಾಣಾ, ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಅಖಿಲೇಶ್ ರೆಡ್ಡಿ ಇದ್ದರು.