ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿ, ಟ್ರಾಫಿಕ್ ಫೈನ್ನಿಂದ ತಪ್ಪಿಸಿಕೊಳ್ಳಲು ಓರ್ವ ಸವಾರ ಬೈಕ್ನ ಹಿಂಬದಿ ನಂಬರ್ ಫ್ಲೇಟ್ಗೆ ಮಾಸ್ಕ್ ಹಾಕಿದ್ದಾನೆ.
ಯಲಹಂಕದ ಕೋಗಿಲು ಕ್ರಾಸ್ ಬಳಿ ಓರ್ವ ಸವಾರ ಬೈಕ್ನ ಹಿಂಬದಿ ನಂಬರ್ ಫ್ಲೇಟ್ಗೆ ಮಾಸ್ಕ್ ಹಾಕಿದ್ದಾನೆ. ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸಿದರೇ ಸಂಚಾರಿ ಲೀಸರು ಗಾಡಿಯ ನಂಬರ್ ಫ್ಲೇಟ್ ಪೋಟೋ ತೆಗೆದು ದಂಡ ಹಾಕುತ್ತಾರೆ. ಅಲ್ಲದೆ ಸಿಸಿಟಿವಿಯಲ್ಲೂ ಬೈಕ್ನ ನಂಬರ್ ಕ್ಯಾಪ್ಚರ್ ಆಗಿ, ದಂಡ ಬೀಳುತ್ತದೆ.
ಅದೇ ನಂಬರ್ ಫ್ಲೇಟ್ಗೆ ಮಾಸ್ಕ್ ಹಾಕಿ, ನಿಯಮ ಉಲ್ಲಂಘಿಸಿದರೇ ಪೊಲೀಸರಿಗೆ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗುದಿಲ್ಲ. ಈ ಮೂಲಕ ದಂಡದಿಂದ ತಪ್ಪಿಸಿಕೊಳ್ಳಬಹುದು ಎಂದು ಸವಾರ ಈ ಐಡಿಯಾ ಮಾಡಿದ್ದಾನೆ.