ಕುಣಿಗಲ್ : ಮೂಡಲ್ ಕುಣಿಗಲ್ ದೊಡ್ಡಕೆರೆ ಕೋಡಿಯಾದ ಹಿನ್ನಲೆಯಲ್ಲಿ ಪುರಸಭೆ ಹಮ್ಮಿಕೊಂಡಿದ್ದ ಗಂಗಾರತಿ, ಬಾಗಿನ ಕಾರ್ಯಕ್ರಮದಲ್ಲಿ ಶಾಸಕ ಡಾ.ಹೆಚ್.ಡಿ.ರಂಗನಾಥ್ ಭಾಗವಹಿಸಿ ಗಂಗಾರತಿ ಹಾಗೂ ಬಾಗಿನ ಅರ್ಪಿಸಿದರು.
ಮಂಗಳವಾರ ದೊಡ್ಡಕೆರೆ ಕೋಡಿಯನ್ನು ಬಾಳೆ ಕಂದು, ಹಸಿರು ತಳಿರು ತೊರಣ ಹಾಗೂ ಹೂಗಳಿಂದ ಸಿಂಗರಿಸಲಾಗಿತ್ತು ಕೋಡಿಯ ಅಂಗಳದಲ್ಲಿ ಮೂಡಲ್ ಕುಣಿಗಲ್ ಕೆರೆ, ನೋಡೋರ್ಗೊಂದೈ, ಮೂಡಿ ಬರ್ತಾನೆ ಚಂದಿರಾಮ ಜನಪದ ಗೀತೆ ಹಾಗೂ ಭರತ ನಾಟ್ಯದ ಜೈಕಾರ ಮೊಳಗಿತ್ತು ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ವಾದ್ಯಗೋಷ್ಠಿಗಳೊಂದಿಗೆ ಶಾಸಕ ಡಾ.ಹೆಚ್.ಡಿ.ರಂಗನಾಥ್ ಮತ್ತು ಜನಪ್ರತಿನಿಧಿಗಳನ್ನು ವೇದಿಕೆಗೆ ಕರೆ ತರಲಾಯಿತು, ದಾರಿ ಉದ್ದಕ್ಕೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು, ನರೆದಿದ್ದ ನೂರಾರು ಜನರಿಗೆ ಲಘು ಉಪಹಾರ ಮತ್ತು ಸಿಹಿ ತಿಂಡಿ ವಿತರಿಸಿ ಸಂಭ್ರಮ ಹಂಚಿಕೊAಡರು,
ಗಂಗಾರತಿ : ಕೆರೆಯ ಕೋಡಿ ಅಂಗಳದಲ್ಲಿ ಆಯೋಜಿಸಿದ ಪೂಜಾ ಕೈಕರ್ಯಗಳನ್ನು ವಿದ್ವಾನ್ ವೈ.ಎಸ್.ಕುಮಾರಸ್ವಾಮಿ ಅವರು ನೆರವೇರಿಸಿದರು, ಬಳಿಕ ಶಾಸಕ ಡಾ.ಹೆಚ್.ಡಿ.ರಂಗನಾಥ್, ಪುರಸಭಾ ಅಧ್ಯಕ್ಷೆ ಎಸ್.ಮಂಜುಳನಾಗರಾಜು, ತಹಶೀಲ್ದಾರ್ ರಶ್ಮಿ.ಯು, ನೂರಾರು ನಾಗರೀಕರ ಸಮ್ಮುಖದಲ್ಲಿ ಗಂಗಾರತಿ ಮಾಡಿ ಬಳಿಕ ಬಾಗಿನ ಅರ್ಪಿಸಿದರು,
ಬಳಿಕ ಮಾತನಾಡಿದ ಶಾಸಕ ಡಾ.ಹೆಚ್.ಡಿ.ರಂಗನಾಥ್ ಕುಣಿಗಲ್ ತಾಲೂಕಿನ ಲಿಂಕ್ ಕೆನಾಲ್ ಕಾಮಗಾರಿಗೆ ಕೆಲವರು ಅಡ್ಡಿ ಪಡಿಸಿದರು, ಇದಕ್ಕೆ ಸರ್ಕಾರ ತಾಂತ್ರಿಕ ಸಮಿತಿಯನ್ನು ರಚಿಸಿತ್ತು, ತಾಂತ್ರಿಕ ಸಮಿತಿ ವರದಿ ನೀಡಿದ ಬಳಿಕ ಕಾಮಗಾರಿ ಆರಂಭಿಸಿದ್ದಾಗ ಜನಪ್ರತಿನಿಧಿಗಳು ಹಾಗೂ ರೈತರು ಹೋರಾಟ ಮಾಡಿ ಕೆನಾಲ್ ಕಾಮಗಾರಿಯನ್ನು ತಡೆದಿದ್ದರು, ಈ ಸಂಬAಧ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದರು ಉಪಮುಖ್ಯಮಂತ್ರಿಗಳು ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದ ಮೇರೆಗೆ ಡಿಸಿಎಂ ಸ್ಥಳ ಪರಿಶೀಲನೆ ನಡೆಸಿದ್ದಾರೆ, ಅತಿ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು,
ಅಚ್ಚುಕಟ್ಟಿಗೆ ನೀರು : ಈ ಹಿಂದೆ ರಸ್ತೆ ಕಾಮಗಾರಿ ಮಾಡುವ ವೇಳೆಯಲ್ಲಿ ಕೆಲ ವ್ಯಕ್ತಿಗಳು ಅಚ್ಚು ಕಟ್ಟು ಪ್ರದೇಶಕ್ಕೆ ನೀರು ಪೂರೈಸುವ ದೊಡ್ಡಕೆರೆಯ ತೂಬಿಗೆ ಸಿಮೆಂಟ್ ಚೀಲಾ ಹಾಕಿ ತೂಬನ್ನು ಹಾಳು ಮಾಡಿ ನೀರು ಹರಿಯದಂತೆ ಮಾಡಿದ್ದಾರೆ ತೂಬು ಹಾಳು ಮಾಡಿರುವ ವ್ಯಕ್ತಿಗಳೇ ತೂಬಿನ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟ್ಟಿದ್ದಾರೆ ಆದರೆ ನಾನು ರಾಜಕಾರಣ ಮಾಡುವುದಿಲ್ಲ, ತೂಬು ದುರಸ್ಥಿ ಮಾಡುವ ಸಂಬAಧ ಟೆಕ್ನಿಕಲ್ ಕಮಿಟಿಯಿಂದ ಸ್ಥಳ ಪರಿಶೀಲನೆ ಮಾಡಿಸಿದ್ದೇನೆ, ನೀರು ತುಂಬಿರುವುದರಿAದ ದುರಸ್ಥಿ ಮಾಡಲು ಆಗುವುದಿಲ್ಲ ನೀರು ಕಡಿಮೆ ಆದ ಬಳಿಕ ದುರಸ್ಥಿ ಮಾಡಲಾಗುವುದೆಂದು ಟೆಕ್ನಿಕಲ್ ಕಮಿಟಿಯವರು ತಿಳಿಸಿದ್ದಾರೆ, ಶೀಘ್ರದಲ್ಲೇ ತೂಬು ದುರಸ್ಥಿ ಮಾಡಿಸಿ ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ಹರಿಸಲಾಗುವುದೆಂದು ಶಾಸಕರು ತಿಳಿಸಿದರು.
ದೊಡ್ಡಕೆರೆ ತಾಲೂಕಿನ ಜೀವನಾಡಿ : ಕುಣಿಗಲ್ ದೊಡ್ಡಕೆರೆ ತಾಲೂಕಿನ ಜನರ ಜೀವನಾಡಿಯಾಗಿದೆ. ಜತೆಗೆ ಪಟ್ಟಣ ನಾಗರೀಕರ ಕುಡಿಯುವ ನೀರಿಗೆ ಸಹಕಾರಿಯಾಗಿದೆ, ಈ ಹಿಂದೆ ಕುಣಿಗಲ್ ದೊಡ್ಡಕೆರೆ ಪರಿಪೂರ್ಣವಾಗಿ ತುಂಬಿ ಕೋಡಿ ಬಿದ್ದು ನಾಗಿನಿ ನದಿ, ಮತ್ತು ಸಂಕೇನಪುರ ಅಣೆಯ ಮೂಲಕ ಮಂಗಳ ಜಲಾಶಯದ ವರೆಗೆ ಹರಿದು, ಸಾವಿರಾರು ಎಕರೆ ರೈತರ ಜಮೀನಿಗೆ ನೀರು ಹರಿದು ಕೃಷಿಗೆ ಅನುಕೂಲವಾಗಿತ್ತು ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿ ಕುಣಿಗಲ್ ದೊಡ್ಡಕೆರೆಗೆ ನೀರಿನ ಆಸರೆ ಕಡಿಮೆಯಾಗಿ ರೈತರ ವ್ಯವಸಾಯಕ್ಕೆ ತೊಂದರೆ ಆಗಿತ್ತು ಬಳಿಕ ಹೇಮಾವತಿ ನೀರು ಹರಿದು ದೊಡ್ಡಕೆರೆ ತುಂಬುತ್ತಿದೆ, ನನ್ನ ಅಧಿಕಾರ ಅವಧಿಯಲ್ಲಿ ನಾಲ್ಕು ಭಾರಿ ಕೆರೆ ಪರಿಪೂರ್ಣವಾಗಿ ತುಂಬಿ ಕೋಡಿ ಬಿದ್ದ ಕಾರಣ ಗಂಗಾರತಿ ಮಾಡಿದ ಭಾಗ್ಯ ನನ್ನದಾಗಿದೆ ಎಂದು ಹೇಳಿದರು,
ಈ ವೇಳೆ ಹೇಮಾವತಿ ಎಇಇ ರವಿ, ಪುರಸಭಾ ಉಪಾಧ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್, ಮುಖ್ಯಾಧಿಕಾರಿ ಕೃಷ್ಣ, ಸದಸ್ಯರಾದ ರಂಗಸ್ವಾಮಿ, ಜಯಲಕ್ಷಿö್ಮ, ಮಂಜುಳರAಗಪ್ಪ, ದೇವರಾಜು, ರೂಪಿಣಿ, ಶಿವಕುಮಾರ್, ಮಾಜಿ ಸದಸ್ಯರಾದ ಶಂಕರ್, ಪಾಪಣ್ಣ, ಮುಖಂಡ ಸುಂದರಕುಪ್ಪೆಪಾಪಣ್ಣ ಮತ್ತಿತರರು ಇದ್ದರು,