ಬೆಂಗಳೂರು: ಯಮ್ಮಿವಾಲ್ ಇದು ಹನ್ನೆರಡು ಸಾವಿರ ಸದಸ್ಯರನ್ನು ಒಳಗೊಂಡಂತಹ ಫೇಸ್‍ಬುಕ್‍ನ ಅಡುಗೆಯ ಪೇಜ್ ಆಗಿದ್ದು, ಇದನ್ನು ರಶ್ಮಿರಾವ್ ಇವರು ಮೂರು ವರ್ಷಗಳ ಹಿಂದೆ ಸ್ಥಾಪನೆಯನ್ನು ಮಾಡಿದ್ದು, ಈ ಗ್ರೂಪನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುತ್ತಾರೆ.
ರಶ್ಮಿರಾವ್ ಇವರ ಜೊತೆಗೆ ಉಳಿದ ಅಡ್ಮಿನಗಳಾದ ಜಾಹ್ನವಿ ಕುಲಕರ್ಣಿ, ಮೈತ್ರಿ ಭಟ್, ಮಂಜುಳಾ ಕಂಸವಿ ಇವರುಗಳೂ ಕೂಡಾ ಕೈಜೋಡಿಸಿದ್ದು, ಶೇರಿಂಗ್ ಇಸ್ ಕೇರಿಂಗ್ ಎನ್ನುವ ಕಾನ್ಸೆಪ್ಟ್ ಅಡಿಯಲ್ಲಿ ತ್ರೈಮಾಸಿಕವಾಗಿ ಸಮಾಜಸೇವೆಯ ಕಾರ್ಯಕ್ರಮ ಹಮ್ಮಿಕೊಂಡು ಬಂದಿರುತ್ತಾರೆ.
ಮಹಿಳಾ ದಿನಾಚರಣೆಯ ನಿಮಿತ್ತ ಯಮ್ಮಿ ವಾಲ್ ಗ್ರೂಪನಲ್ಲಿ ಆನಲೈನ್ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಅದರ ಸ್ಪಾನ್ಸರ್ ಆದಂತಹ ಮುಳಿಯ ಜ್ಯುವೆಲರ್ಸ ಇವರ ಬೆಂಗಳೂರಿನ ಶಾಖೆಯಲ್ಲಿ ಸ್ತ್ರೀ ಸಂಭ್ರಮ ಎನ್ನುವಂತಹ ಕಾರ್ಯಕ್ರಮ ಹಮ್ಮಿಕೊಂಡು ಬಹುಮಾನ ವಿತರಣೆಯನ್ನು ನಡೆಸಲಾಯಿತು.
ಒಟ್ಟು ಆರು ಜನ ವಿಜೇತರಿಗೆ ಬಹುಮಾನದ ಜೊತೆಗೆ ಟ್ರೋಫಿಯನ್ನೂ ಕೂಡಾ ನೀಡಿ, ಗೌರವಿಸಲಾಯಿತು. ಯಮ್ಮಿವಾಲ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತುಂಬಾ ಮಹಿಳೆಯರು ಗುಲಾಬಿ ರಂಗಿನಲ್ಲಿ ಮಿಂಚಿ, ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದ್ದರು.ಮುಳಿಯ ಜ್ಯುವೆಲರ್ಸ ಅಂಗಡಿಯಲ್ಲಿ ಕಾರ್ಯಕ್ರಮವನ್ನ ತುಂಬಾ ಚೆನ್ನಾಗಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಡಾ.ಶುಭಮಂಗಳ ಸುನಿಲ್, ಮುಳಿಯ ಜ್ಯುವೆಲರ್ಸನಿಂದ ಶ್ರೀ ವೇಣು ಶರ್ಮಾ, ಬೆಂಗಳೂರು ವಿಭಾಗದ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್ ಇವರು ಉಪಸ್ಥಿತರಿದ್ದರು. ಶ್ರೀಮತಿ ಶುಭಮಂಗಳ ಸುನಿಲ್ ಇವರು GocyBex ಈ ಕಂಪನಿಯ ಸಿಇಓ, AKBMನ ರಾಜ್ಯ ಮಹಿಳಾ ಸಂಚಾಲಕಿ ಹಾಗೂ ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ ಕೂಡಾ ಆಗಿದ್ದಾರೆ.
ಹಾಗೂ ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹಲವಾರು ಮನರಂಜನೆಯ ಆಟಗಳನ್ನೂ ಕೂಡಾ ಯಮ್ಮಿವಾಲ್ ಪೌಂಡರ್ ಆದಂತಹ ರಶ್ಮಿ ರಾವ್, ಅಡ್ಮಿನಗಳಾದ ಜಾಹ್ನವಿ ಕುಲಕರ್ಣಿ, ಮೈತ್ರಿ ಭಟ್, ಮಂಜುಳಾ ಕಂಸವಿ ಇವರು ನಡೆಸಿದರು. ಮುಳಿಯ ಜ್ಯುವೆಲರ್ಸ ಮಾನೇಜರ್ ಸುಬ್ರಮಣ್ಯ ಭಟ್ ಇವರು ಸ್ವಾಗತ ಹಾಗೂ ವಂದನಾರ್ಪಣೆ ಮಾಡಿದರು.
ಯಮ್ಮಿವಾಲ್ ಅಡ್ಮಿನ್ ಮೈತ್ರಿಭಟ್ ಇವರು ಅತಿಥಿಗಳ ಪರಿಚಯ ಮಾಡಿದರು. ಆಟಗಳಲ್ಲಿ ಗೆದ್ದವರಿಗೂ ಕೂಡಾ ಬಹುಮಾನ ನೀಡಿ ಗೌರವಿಸಲಾಯಿತು. ಇಬ್ಬರು ಸದಸ್ಯರಿಗೆ ವರ್ಷದ ಶೆಫ್ ಎನ್ನುವ ಬಿರುದನ್ನು ನೀಡಿ ಗೌರವಿಸಲಾಯಿತು. ಮುಳಿಯ ಜ್ಯುವೆಲರ್ಸ ಸಿಬ್ಬಂದಿಗಳೂ ಕೂಡಾ ಸಹಕಾರವನ್ನು ನೀಡಿದರು.
ಮುಳಿಯ ಜ್ಯುವೆಲರ್ಸನಲ್ಲಿ ಈ ದಿನ ಮಹಿಳೆಯರ ಕಣ್ಣಿಗೆ ಹಬ್ಬವಾಗಿತ್ತು. ಸುಂದರವಾದ ಡಿಸೈನಗಳನ್ನು ನೋಡಿ ಮಹಿಳೆಯರು ತುಂಬಾ ಖುಷಿಪಟ್ಟರು ಹಾಗೂ ಅವರ ಅಂಗಡಿಯ ಉಪಯುಕ್ತ ಸ್ಕೀಮಗಳಲ್ಲಿ ಹೂಡಿಕೆಯನ್ನೂ ಕೂಡಾ ಮಾಡಿ ಸಂತೋಷಪಟ್ಟರು.
Leave a Review