ಬೆಂಗಳೂರು: ಬೆಂಗಳೂರಿನ ಗಾಂಧಿ ಭವನದ ಬಾಪೂ ಸಂಭಾಂಗಣದಲ್ಲಿ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆ ಇವರು ಆಯೋಜಿಸಿರುವ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ, ಅರಿವಿನ ಅನುಭಾವಿಗಳ ಅನುಭವ ಮಂಟಪದಲ್ಲಿ ಮುಕ್ತ ಸಂವಾದ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ,
ಅಕೈ ಪದ್ಮಶಾಲಿ ಲೈಂಗಿಕ ಅಲ್ಪಸಂಖ್ಯಾತರ ಹಾಗೂ ಮಾನವ ಹಕ್ಕುಗಳ ಪರ ಹೋರಾಟಗಾರ್ತಿ ಹಾಗೂ ನ್ಯಾ. ಎಚ್. ಎನ್. ನಾಗಮೋಹನದಾಸ್ ನಿವೃತ್ತ ನ್ಯಾಯಾಧೀಶರು, ಕರ್ನಾಟಕ ಉಚ್ಚ ನ್ಯಾಯಾಲಯ, ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂವಿಧಾನದ ಪಿಠಿಕೆಯನ್ನು ಓದುವ ಮೂಖೇನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಎಚ್.ಕೆ, ಬರಹಗಾರರು ಮತ್ತು ಸಾಮಾಜಿಕ ಚಿಂತಕರು, ದಿನೇಶ್ ಅಮೀನ್ ಹಿರಿಯ ಪತ್ರಕರ್ತರು, ಸಾಮಾಜಿಕ ಚಿಂತಕರು, ಫಾದರ್ ಅರುಣ್ ಲೂಯಿಸ್ ಎಸ್.ಜೆ. , ಜನಾಬ್ ಮೌಲಾನ ಮುಹಮ್ಮದ್ ಯೂಸುಫ್ ಕನ್ನಿ, ಪ್ರೊ . ಎಸ್.ಜಿ. ಸಿದ್ದರಾಮಯ್ಯ, ಮಾಜಿ ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಿರಿಯ ಸಾಹಿತಿಗಳು ಹಾಗೂ ವಿಮರ್ಶಕರು, ಕೈ. ವೈ. ನಾರಾಯಣ ಸ್ವಾಮಿ ಸಾಹಿತಿಗಳು ಮತ್ತು ಪ್ರಖ್ಯಾತ ರಂಗಭೂಮಿ ನಾಟಕಕಾರರು, ಡಾ. ಎಂ. ಎಸ್. ಆಶಾದೇವಿ ಲೇಖಕರು ಮತ್ತು ವಿಮರ್ಶಕರು ಹಾಗೂ ಗಣ್ಯರು, ಚಿಂತಕರು, ಸಾರ್ವಜನಿಕರು ಉಪಸ್ಥಿತರಿದ್ದರು.