ಬೆಂಗಳೂರು : ೪೦ ರಿಂದ ೪೫ ವರ್ಷದ ಅಪರಿಚಿತ ಗಂಡಸಿನ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಮೆಟ್ರೋ ಪಿಲ್ಲರ್ ೧೧೩ ಹತ್ತಿರ ಅಪರಿಚಿತ ಶವಪತ್ತೆಯಾಗಿರುವುದನ್ನು ಕೋಣನಕುಂಟೆ ಪೊಲೀಸರಿಗೆ ಸಾರ್ವಜನಿಕರು ನೀಡಿದ ಮಾಹಿತಿ
ಮೇರೆಗೆ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. ಪ್ರಥಮ ಮಾಹಿತಿಯ ಪ್ರಕಾರ ಪೇಪರ್ ಅಥವಾ ಕಸ ಆಯುವವನು ಎಂದು ಪೊಲೀಸರು ತಿಳಿಸಿರುತ್ತಾರೆ
“ತಲೆ ಮೇಲೆ ಕಲ್ಲು ಹಾಕಿ ಅಪರಿಚಿತ ವ್ಯಕ್ತಿ ಕೊಲೆ “
