ಬೆಂಗಳೂರು : ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಡರಹಳ್ಳಿ ಗೇಟ್ ಬಳಿ ಇಂದು ಬೆಳಿಗ್ಗೆ ೪:೩೦ ಸುಮಾರಿಗೆ ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿರುತ್ತಾರೆ.
ಬೆಂಗಳೂರಿನ ಕಾಲಭೈರಸಂದ್ರದ ನಿವಾಸಿ ಸೈಮನ್ ಕಾರ್ ಚಾಲಕ(೩೯) ಮೃತಪಟ್ಟರೆ ಶಕೀಲಾ ಮತ್ತು ಹಾಲಿಸನ್ ರವರು ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ.
ಕಾರಿನಲ್ಲಿ ಎಂಟು ಜನರಿದ್ದು ಇವರು
ಗಳೆಲ್ಲ ಡಾಬಸ್ಪೇಟೆಯ ಸ್ನೇಹಿತನ ಮನೆಗೆ ಹೋಗುವ ಸಮಯ ದಲ್ಲಿ ಅಪಘಾತವಾಗಿದೆ ಎಂದು ನೆಲಮಂಗಲ ಸಂಚಾರಿ ಇನ್ಸ್ಪೆಕ್ಟರ್ ತಿಳಿಸಿದರು.
ನೆಲಮಂಗಲ ಸಂಚಾರಿ ಪೊಲೀಸರು ಅಪಘಾತ ಪ್ರಕರಣ ದಾಖಲು ಮಾಡಿಕೊಂಡು ಅಪರಿಚಿತ ವಾಹನವನ್ನು ಪತ್ತೆ ಮಾಡಲು ಕ್ರಮ ಕೈಗೊಂಡಿರುತ್ತಾರೆ.



