ಪೀಣ್ಯ ದಾಸರಹಳ್ಳಿ: ರಾಷ್ಟ್ರಕವಿ ಕುವೆಂಪು ಹೇಳುವ ಹಾಗೆ ಕ್ರೈಸ್ತ ಮಿಷನರಿಗಳು ಭಾರತಕ್ಕೆ ಬಂದ ನಂತರ ಶಿಕ್ಷಣ ಸಾರ್ವತ್ರಿಕರಣವಾಗಿ ತಳ ಸಮುದಾಯ, ಶೋಷಿತ ಸಮುದಾಯ, ದೀನ ದಲಿತರು, ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ಮತ್ತು ಜ್ಞಾನವನ್ನು ನೀಡಿ ಎಲ್ಲರೂ ಸಮಾಜದ ಮುಖ್ಯ ವಾಹಿನಿಗೆ ಬರಲು ಕ್ರೈಸ್ತ ಮಿಷನರಿಗಳ ಪಾತ್ರ ಅನನ್ಯ ಎಂದು ಸರ್ಕಾರದ ಪು.ತಿ.ನ.ಟ್ರಸ್ಟ್ನ ಸದಸ್ಯರಾದ ಡಾ.ಕುಮಾರ್ಕೊಪ್ಪ ತಿಳಿಸಿದರು.
ಗೊಲ್ಲರದೊಡ್ಡಿ ಗ್ರಾಮದ ಪ್ರೀತಿ ನಿಲಯ ವಿಶೇಷ ಮಕ್ಕಳ ವಸತಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಆರೋಗ್ಯ, ಶಿಕ್ಷಣ, ಸಾಮಾಜಿಕ ಸೇವೆ” ಕ್ಷೇತ್ರಗಳಲ್ಲಿ ಇಡಿ ದೇಶದ ಉದ್ದಗಲಕ್ಕೆ ಕ್ರೈಸ್ತಮಿಷನರಿಗಳ ಫಾದರ್ ಮತ್ತು ಸಿಸ್ಟರ್ರವರು ಸೇವೆ ಸಲ್ಲಿಸುವ ಮೂಲಕ ಗೊಲ್ಲರದೊಡ್ಡಿಯಂತಹ ಕುಗ್ರಾಮದಲ್ಲೂ ಗುಣಮಟ್ಟದ ಶಿಕ್ಷಣವನು ನೀಡುವ ಸಲುವಾಗಿ ದಿವ್ಯ ಜ್ಯೋತಿ ಶಾಲೆ ಮತ್ತು ಬುದ್ದಿಮಾಂದ್ಯ ಮಕ್ಕಳಿಗಾಗಿ “ಪ್ರೀತಿ ವಿಶೇಷ ಮಕ್ಕಳ ವಸತಿ ಶಾಲೆ” ತೆರೆದು ಕ್ರಿಯಾತ್ಮಕವಾಗಿ ಸಾಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದನ್ನು ನಾನು ಹೃದಯ ತುಂಬಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಸೆಂಟ್ ಥಾಮಸ್ ಮಿಷನ್ ಸೊಸೈಟಿ ಅಧ್ಯಕ್ಷರಾದ ಫಾದರ್ ಸೋಜನ್ ತಮ್ಮ ಸಭಾಧ್ಯಕ್ಷೀಯ ಬಾಷಣದಲ್ಲಿ ರಕ್ತ ಸಂಬAಧದ ಮದುವೆಯಾಗುವ ಮೂಲಕ ಹಾಗೂ ಗರ್ಬಿಣಿಯರಿಗೆ ಪೌಷ್ಠಿಕ ಆಹಾರದ ಕೊರತೆ ಮತ್ತು ಗರ್ಭಧರಿಸಿದ ಸಂದರ್ಭದಲ್ಲಿ ಅಘಾತಕಾರಿ ವಿಚಾರಗಳನ್ನು ಮುಟ್ಟಿಸುವುದು, ದೈಹಿಕ ಮಾನಸಿಕ ಕಿರುಕುಳಕ್ಕೆ ಒಳಗಾಗುವುದು ಹಾಗೂ ಗರ್ಭಾ ವ್ಯವಸ್ಥೆಯಲ್ಲಿ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಪಡೆಯದಿರುವುದು ಬುದ್ದಿಮಾಂದ್ಯ ಮಕ್ಕಳು ಜನಿಸಲು ಕಾರಣವಾಗುತ್ತವೆ. “ಮಂಡ್ಯದ ಸೆಂಟ್ ಥಾಮಸ್ ಮಿಷನ್ ಸೊಸೈಟಿ” ಮಂಡ್ಯ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ವಿಶೇಷ ಮಕ್ಕಳ ಗಣತಿಯನ್ನು ಮಾಡಿ ಅವರಿಗಾಗಿ ಶಾಲೆಯನ್ನು ತೆರೆಯುವ ಉದ್ದೇಶವನ್ನು ಇಟ್ಟಿಕೊಂಡು 18 ವರ್ಷಗಳಿಂದ ಈ ಶಾಲೆಯನ್ನು ನಡೆಸುತ್ತಿದ್ದು ಮಕ್ಕಳು ಸಂಗೀತ, ಕಥೆ, ನೃತ್ಯ, ಆಟ ನಂತರ ಪಾಠದ ಮೂಲಕ ಶೇಕಡ 30% ಭಾಗ ಗುಣಮುಖರಾಗಿದ್ದು ಈ ಕಾರಣಕ್ಕಾಗಿ ಈ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ಸಮುದಾಯ ಹಾಗೂ ಅಡುಗೆ ಸಹಾಯಕರನ್ನು ನಾನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ವೇದಿಕೆಯಲ್ಲಿ 58 ವರ್ಷ ತುಂಬಿ 59ನೇ ವಸಂತಕ್ಕೆ ಕಾಲಿಟ್ಟ ಡಾ.ಕುಮಾರ್ಕೊಪ್ಪ ಮತ್ತು ಅದೇ ಶಾಲೆಯ ಶಿಕ್ಷಕ 30 ವರ್ಷದ ದಿಲೀಪ್ ರವರಿಗೆ ವೇದಿಕೆಯಲ್ಲಿ ಅಭಿನಂದಿಸಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೀತಿ ನಿಲಯದ ವ್ಯವಸ್ಥಾಪಕರಾದ ಫಾದರ್ ಥೋಮಸ್, ಬೆಸಗರಹಳ್ಳಿ ಸಂತ ಜೋಸೇಫರ ಶಾಲೆಯ ವ್ಯವಸ್ಥಾಪಕರಾದ ರಾಜೇಶ್, ಸೇಂಟ್ ಥಾಮಸ್ ಮಿಷನ್ ಸೊಸೈಟಿಯ ಕೋಶಾಧ್ಯಕ್ಷರಾದ ಫಾದರ್ ಶಿಜೋಮೋನ್, ದಿವ್ಯಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯರಾದ ಫಾದರ್ ಬಿನೋಯ್, ಪ್ರೀತಿ ವಸತಿ ಶಾಲೆಯ ಮುಖ್ಯಸ್ಥರಾದ ಸಿಸ್ಟರ್ ಲಿಸ್ ಬಿಲ್, ಮುಖ್ಯ ಶಿಕ್ಷಕರಾದ ಸಬಾಸ್ಟಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಣ ಮತ್ತು ಜ್ಞಾನವನ್ನು ನೀಡಿ ಎಲ್ಲರೂ ಸಮಾಜದ ಮುಖ್ಯ ವಾಹಿನಿಗೆ ಬರಲು ಕ್ರೈಸ್ತ ಮಿಷಿನರಿಗಳ ಪಾತ್ರ ಅನನ್ಯ: ಡಾ.ಕುಮಾರ್ ಕೊಪ್ಪ



