ಬಲಹೀನತೆಯಿಂದ ಕ್ರೂರತನ ಹುಟ್ಟುತ್ತದೆ ಎಂಬ ವಾಕ್ಯವನ್ನು ರೋಮ್ ಫಿಲಾಸಫರ್ ಸೆನಕ ಅಂದೇ ಹೇಳಿದ್ದರು. ಇಂತಹುದೆ ಅಂಶಗಳನ್ನು ಹೆಕ್ಕಿಕೊಂಡು ಅನರ್ಥ ಎನ್ನುವ ಸಿನಿಮಾದ ಅಡಿಬರಹಕ್ಕೆ ಬಳಸಲಾಗಿ, ಸೆನ್ಸಾರ್ನಿಂದ ಪ್ರಶಂಸೆ ಪಡೆದುಕೊಂಡಿದೆ. ಪ್ರಚಾರದ ಮೊದಲ ಹಂತವಾಗಿ ಟೀಸರ್ ಹಾಗೂ ಸಾಂಗ್, ರೇಣುಕಾಂಬ ಸ್ಟುಡಿಯೋದಲ್ಲಿ ಕಿಕ್ಕಿರಿದ ಜನರು ಎದುರು ಲೋಕಾರ್ಪಣೆಗೊಂಡಿತು.
ನಿರ್ದೇಶಕರು ಮಾಧ್ಯಮಮಿತ್ರರನ್ನು ಮುಖ್ಯ ಅತಿಥಿ ಎಂದು ಪರಿಗಣಿಸಿದ್ದರಿಂದ, ಹಿರಿಯ ಪತ್ರಕರ್ತರಿಂದ ಟೇಸರ್ ಹಾಗೂ ಸಹ ನಿರ್ಮಾಪಕಿ ಜೆ.ಅಂಜಲಿ ಪುತ್ರಿಯರಾದ ಕುಮಾರಿ ಜಯಕೀರ್ತಿ ಮತ್ತು ಜಯಕನ್ನಿಕ ಜಂಟಿಯಾಗಿ ಹಾಡನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯಶಸ್ವಿ ಧಾರವಾಹಿಗಳಾದ ಅರ್ಧ ಸತ್ಯ ಧಾರವಾಹಿಯನ್ನು ನಿರ್ದೇಶಿಸಿ ಅತ್ಯುತ್ತಮ ಆರ್ಯಭಟ ಪ್ರಶಸ್ತಿಯನ್ನು ಪಡೆದು, ನಂತರ ಗುಪ್ತಗಾಮಿನಿ ಪ್ರೀತಿ ಇಲ್ಲದ ಮೇಲೆ ಯಶಸ್ವಿ ಧಾರವಾಹಿಗಳಾದ ಮೊದಲ ಕಂತುಗಳ ನಿರ್ದೇಶನ ಮಾಡಿ, ಆ ನಂತರ ಸುಮಾರು 3500 ಕಂತುಗಳ ಅನೇಕ ಧಾರವಾಹಿಗಳಾದ ಶಿವ ಕದನ ಲಕುಮಿ ಚುಕ್ಕಿ ಗೋಕುಲದಲ್ಲಿ ಸೀತೆ ನಿರ್ದೇಶಿಸಿರುತ್ತಾರೆ.
ಮೆಲ್ಲುಸಿರೆ ಸವಿಗಾನ ಚಿತ್ರವನ್ನು ನಿರ್ದೇಶನ ಮಾಡಿರುವ ರಮೇಶ್ ಕೃಷ್ಣ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅವಕಾಶ್-ಆಕೃತಿ ಎರಡು ಪಾತ್ರಗಳ ಸುತ್ತ ಚಿತ್ರವು ಸಾಗುತ್ತದೆ. ಇಬ್ಬರು ಒಂದು ಮಟ್ಟಕ್ಕೆ ಪ್ರೀತಿಸಿರುತ್ತಾರೆ. ನಾವುಗಳು ಬ್ರೇಕ್ಅಪ್ ಎನ್ನುವ ಪದವನ್ನು ನಮ್ಮ ಮನಸ್ಸಿನಿಂದ ಅಳಿಸಿ ಹಾಕಿದ ನಂತರ, ಅಮವ್ಯಾಸೆಯ ದಿನ ಯಮಗಂಡ ಕಾಲದಲ್ಲಿ ಮದುವೆಯಾಗಲು ನಿರ್ಧರಿಸಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಒಂದು ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದಾಗ ಏನಾಗುತ್ತದೆ. ನೋಡುಗರಿಗೆ ಊಹಿಸಲಾಗದ ತಿರುವುಗಳಿವೆ. ಕ್ಲೈಮಾಕ್ಸ್ದಲ್ಲಿ ಹೀಗೂ ಆಗಬಹುದು ಎನ್ನುವಲ್ಲಿಗೆ ಶುಭಂ ಬರುತ್ತದೆ.
ನಮ್ಮ ಚಿತ್ರವು ಎಲ್ಲಾ ಕಮರ್ಷಿಯಲ್ ಸಿನಿಮಾಗಳ ಅಂಶಗಳನ್ನು ಹೊಂದಿದ್ದರೂ, ಒಂದು ಅಂಶವು ಖಂಡಿತ ಭಿನ್ನವಾಗಿದೆ. ಅದನ್ನು ತಿಳಿಯಲು ನೀವುಗಳು ಚಿತ್ರಮಂದಿರಕ್ಕೆ ಬನ್ನಿರೆಂದು ಕೋರಿದರು.ನಾಯಕನಾಗಬೇಕೆಂದು ಆಸೆ ಪಟ್ಟಿದ್ದೆ. ಉದ್ಯಮದಲ್ಲಿ ಯಶಸ್ಸು ಕಂಡು, ಈಗ ತೇಜಸ್ ಸಿನಿ ಕ್ರಿಯೇಶನ್ಸ್ ಮೂಲಕ ನಿರ್ಮಾಪಕನಾಗಿದ್ದೇನೆ ಎನ್ನುತ್ತಾರೆ ಶ್ರೀಧರ್.ಎನ್.ಸಿ.ಹೊಸಮನೆ. ನಟ ಮಂಡ್ಯರಮೇಶ್ ಬಳಿ ತರಭೇತಿ ಪಡೆದುಕೊಂಡಿರುವ ವಿಶಾಲ್ ಮಣ್ಣೂರು ನಾಯಕ. ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಮಂಡ್ಯದ ವಿಹಾನಿ, ಕಿರುಚಿತ್ರಗಳಲ್ಲಿ ನಟಿಸಿ, ಈಗ ನಾಯಕಿಯಾಗಿ ಬಡ್ತಿಗೊಂಡಿದ್ದಾರೆ. ಉಳಿದಂತೆ ಸಿ.ವಿಜಯ್ಕುಮಾರ್, ರಕ್ಷಿತ್, ಗಣೇಶ್, ಪ್ರಸನ್ನ ಬಾಗೀನ, ಅರ್ಪಿತ ಮುಂತಾದವರು ನಟಿಸಿದ್ದಾರೆ.
ಸಾಹಿತ್ಯ-ಸಂಗೀತ ಡಾ.ವಿ.ನಾಗೇಂದ್ರಪ್ರಸಾದ್, ಛಾಯಾಗ್ರಹಣ ಕುಮಾರ್ಗೌಡನಾಗವಾರ, ಸಂಕಲನ ನಿಷಿತ್ಪೂಜಾರಿ-ವಿನಯ್, ಹಿನ್ನಲೆ ಶಬ್ದ ನಿತಿನ್, ಸಾಹಸ ಕುಂಗು ಫು ಚಂದ್ರು ಅವರದಾಗಿದೆ. ವಿತರಕ ಎಂ.ರಮೇಶ್ ಒಡೆತನದ ಅಕ್ಷರ ಫಿಲಿಂಸ್ ಮುಖಾಂತರ ಚಿತ್ರವು ಜೂನ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.