ದೊಡ್ಡಬಳ್ಳಾಪುರ: ರಾಜ್ಯ ಹೈಕೋರ್ಟ್ ಆದೇಶದಂತೆ ತಾಲ್ಲೂಕು ವಕೀಲರ ಸಂಘಕ್ಕೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳ ಹೆಸರುಗಳನ್ನು ಸೋಮವಾರ ಚುನಾವಣಾ ಅಧಿಕಾರಿ ಎನ್.ಎಸ್.ಮುರಳಿಕೃಷ್ಣ ಅವರು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಆಯ್ಕೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ನಗರದ ಸಿವಿಲ್ ಕೋರ್ಟ್ ಆವರಣದಲ್ಲಿನ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಸಹಾಯಕ ನೋಂದಣಾಧಿಕಾರಿ ಸಹಕಾರ ಸಂಘಗಳು ಹಾಗೂ ವಕೀಲರ ಸಂಘದ ಆಡಳಿತಾಧಿಕಾರಿ ಶೀಲಾ ಅವರು ಮಾಹಿತಿಯಂತೆ, ತಾಲ್ಲೂಕು ವಕೀಲರ ಸಂಘದ ಮತದಾರರ ಪಟ್ಟಿಯಲ್ಲಿನ ಗೊಂದಲವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ಕಾರಣದಿಂದಾಗಿ ಚುನಾವಣೆ ಮುಗಿದು ಒಂದು ವಾರವಾಗಿದ್ದರೂ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಿರಲಿಲ್ಲ. ಪ್ರಸ್ತುತ ವಿವಾದ ಬಗೆಹರಿದ ಹೈಕೋರ್ಟ್ ಆದೇಶದ ನಿಯಮದಂತೆಯೇ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲಾಗಿದೆ ಎಂದರು.ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಎಂ.ರವಿ, ಉಪಾಧ್ಯಕ್ಷರಾಗಿ ಎಂ.ಆರ್.ಸುರೇಶ್, ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ಎಂ.ಮುನಿರಾಜು, ನಿರ್ದೇಶಕರಾಗಿ ಸೈಯದ್ ನಾಜಿಮ್ ಉಲ್ಲಾ, ಬಿ.ಪ್ರವೀಣ್ ಕುಮಾರ್ ಗುಪ್ತ, ಮಹಮ್ಮದ್ ಮಮ್ತಾಜ್, ಎನ್.ಲೀಲಾವತಿ, ಎ.ಎಸ್.ಚಂದೇಶ್ ಕುಮಾರ್, ಎನ್.ಅನಿತ, ಆರ್.ಪ್ರಭಾಕರ್, ಟಿ.ಜೆ.ಶಿವಕುಮಾರ್, ಟಿ.ಉಮೇಶ, ಎಂ.ಮೋಹನ್ಕುಮಾರ್ ಆಯ್ಕೆಯಾಗಿದ್ದಾರೆ.