ಶ್ರೀಹರಿಕೋಟಾ: ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಇಸ್ರೋ ಸಂಸ್ಥೆ ಮತ್ತೊಂದು ಸಾಧನೆಯಗರಿಯನ್ನುಮುಡಿಗೇರಿಸಿಕೊಂಡಿದೆ. 2024ರ ಮೊದಲ ದಿನದಂದೇ ಇಸ್ರೋ ಶ್ರೀಹರಿಕೋಟಾ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ಪೋಲಾರ್ ಸ್ಯಾಟೆಲೈಟ್ ಲಾಂಚ್ ವೆಹಿಕಲ್ ಅನ್ನು ಗಗನಕ್ಕೆ ಹಾರಿಸಿದೆ.
ಎಕ್ಸ್ ಪೋಸ್ಯಾಟ್ ಅಂತ ಕರೆಸಿಕೊಳ್ಳುವ ಈ ಎಕ್ಸ್-ರೇ ಪೊಲಾರಿ ಮೀಟರ್ ಉಪಗ್ರಹ ತನ್ನೊಂದಿಗೆ ವಿವಿಧೋದ್ದೇಶಗಳ 10 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹೊತ್ತೊಯ್ದಿದೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ ಉಪಗ್ರಹಗಳನ್ನು ರಾಷ್ಟ್ರದ ಸ್ಟಾರ್ಟ್ ಅಪ್, ಶೈಕ್ಷಣಿಕ ಕೇಂದ್ರ ಮತ್ತು ಇಸ್ರೋ ಕೇಂದ್ರಗಳು ನಿರ್ಮಾಣ ಮಾಡಿವೆ. ಎಲ್ಲ ಭಾರತೀಯರನ್ನು ಮತ್ತೊಮ್ಮೆ ಹೆಮ್ಮೆ ಪಡುವ ಸಂದರ್ಭನ್ನು ಹೊಸವರ್ಷದ ಮೊದಲ ದಿನವೇ ನೀಡಿದೆ.