ಬೆAಗಳೂರು : ಕನ್ನಡ ಬಿಗ್ ಬಾಸ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಒಂದೆಡೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿದ್ದು, ಇನ್ನೊಂದು ಕಡೆ ಪೊಲೀಸ್ ಅನುಮತಿಯನ್ನು ಸಹ ಪಡೆದಿಲ್ಲ. ಈ ಹಿಂದೆ ವಿದ್ಯುತ್ ಸಂಪರ್ಕ ಕಡಿತಕ್ಕೆ ನೋಟಿಸ್ ಜಾರಿ ಮಾಡಲಾಗಿತ್ತು . ಅನಧಿಕೃತ ಎಂದು ವಿದ್ಯುತ್ ಸಂಪರ್ಕ ಕಡಿತಕ್ಕೆ ಸೂಚನೆ ನೀಡಲಾಗಿತ್ತು.BMRDA ಯಾ STF ಈ ತಂಡದಿAದ AEE ಗೆ ಸೂಚನೆ ನೀಡಲಾಗಿತ್ತು. ಈಗಾಗಲೇ ಮಾಯನ್ಯ ನಿಯಂತ್ರಣ ಮಂಡಳಿ ನೋಟಿಸ್ ಇಡಲಾಗಿದೆ.
೩೫ ಎಕರೆ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋ ರಾಮನಗರ ತಾಲೂಕಿನ ಬಿಡದಿಯಲ್ಲಿರುವಂತಹ ಸ್ಟುಡಿಯೋಗೆ ಎರಡೆರಡು ಸಂಕಷ್ಟ ಎದುರಾಗಿದ್ದು, ಸ್ಟುಡಿಯೋಗೆ ಬೀಗ ನಡೆಯಬೇಕು ಅಂತ ಹಿರಿಯ ಪರಿಸರಾಧಿಕಾರಿ ವಸುದೇವರಿಂದ ವರದಿ ಜಿಲ್ಲಾಧಿಕಾರಿಗೆ ನೀಡಿದ್ದಾರೆ. ರಾಜ್ಯ ನೀರು ಸಂಸ್ಕರಣ ಘಟಕ ಮಾಡದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್ ಬಾಸ್ ಶೋ ಮನೆ ಬಂದ್ ಮಾಡುವಂತೆ ನಿನ್ನೆ ನೋಟಿಸ್ ನೀಡಿತ್ತು.
ಇದೀಗ ಪೊಲೀಸ್ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ ಅನುಮತಿ ಪಡೆಯದೇ ಬಿಗ್ ಬಾಸ್ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಪ್ರಮುಖವಾಗಿ ಬಿಗ್ ಬಾಸ್ ಶೋ ನಡೆಸಲು ಪೊಲೀಸರು ಅನುಮತಿ ಕಡ್ಡಾಯವಾಗಿದ್ದು, ಆದರೆ ಶೋ ನಡೆಸಲು ಪೊಲೀಸರ ಯಾವುದೇ ಅನುಮತಿ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಶೋಗೆ ಸಂಕಷ್ಟ ಎದುರಾಗಿದ್ದು, ಹೀಗಾಗಿ ಬಿಗ್ ಬಾಸ್ ಶೋ ಮತ್ತು ಮನೆಗೆ ಬೀಗ ಬೀಳುತ್ತಾ ಎನ್ನುವುದು ಕಾದು ನೋಡಬೇಕಾಗಿದೆ.