ನೋಯ್ಡಾ: ಮೂರು ಬಾರಿಯ ಚಾಂಪಿಯನ್ಸ್ ಪಾಟ್ನಾ ಪೈರೇಟ್ಸ್ ತಂಡವು ನೋಯ್ಡಾ ಚರಣದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ ತಂಡವನ್ನು 46-33 ಅಂಕಗಳಿಂದ ಸೋಲಿಸಿ ಶುಭಾರಂಭ ಮಾಡಿದರೆ ಬೆಂಗಳೂರು ಬುಲ್ಸ್ ತಂಡವು ಕೊನೆ ಹಂತದಲ್ಲಿ ಅಮೋಘವಾಗಿ ಹೋರಾಡಿದರೂ 33-34 ಅಂಕಗಳಿಂದ ಯುಪಿ ಯೋಧಾಸ್ ತಂಡದೆದುರು ಸೋಲಿನ ಆಘಾತ ಅನುಭವಿಸಿತು.
ಬೆಂಗಳೂರು ಬುಲ್ಸ್ ತಂಡವು ರೈಡ್ನಲ್ಲಿ 21 ಅಂಕ ಪಡೆದರೆ ಟ್ಯಾಕಲ್ನಲ್ಲಿ 11 ಅಂಕ ಪಡೆಯಿತು. ಪಂದ್ಯದ ಕೊನೆ ಹಂತದಲ್ಲಿ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಪಟ್ಟರೂ ಕೇವಲ ಒಂದು ಅಂಕದಿಂದ ತಂಡ ಸೋಲು ಕಾಣಬೇಕಾಯಿತು.
ಯುಪಿ ಆರಂಭ ದಿಂದಲೇ ಮೇಲುಗೈ ಸಾಧಿಸಿತ್ತು. ಕೊನೆ ಹಂತದಲ್ಲಿ ಬುಲ್ಸ್ನ ಆಟಕ್ಕೆ ಹೆದರಿದ್ದರೂ ಅಂತಿಮವಾಗಿ ಗೆಲುವು ದಾಖಲಿಸಿತು.ಪಾಟ್ನಾ ತಂಡದ ಪರ ಮಂಜಿತ್ 13 ಅಂಕ ಗಳಿಸಿದರೆ ಕೃಷನ್ ದುಲ್ ಐದಂಕ ಪಡೆದರು.