ಶೇಕ್ ಇಟ್ ಪುಷ್ಪಾವತಿಯ ಐಶ್ವರ್ಯ ರಂಗರಾಜನ್ ಹಾಡಿರಿವ ಧರ್ಮಂ ಚಿತ್ರದ “ನಾನು ದಿಲ್ಲಿ ಹಳ್ಳಿ ” ಹಾಡು ಪಡ್ಡೆ ಹುಡಗರ ಮನಸೆಳೆವಂತಿದೆ. ಈ ಧರ್ಮಂ ಚಿತ್ರವುಶಾಂತ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಡಾ. ಎಸ್. ಕೆ. ರಾಮಕೃಷ್ಣ ನಿರ್ಮಾಣದ ನಾಗಮುಖ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರದ ನಾನು ದಿಲ್ಲಿ ಹಳ್ಳಿ ಎಂಬ ಹಾಡು ಬಿಡುಗಡೆಯಾಗಿದೆ. ಸರೆಗಮ ಕನ್ನಡ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಐಟಂ ಸಾಂಗ್ ಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ.
ನಾಗಮುಖ ಸಾಹಿತ್ಯ ಬರೆದಿರುವ ನಾನು ದಿಲ್ಲಿ ಹಳ್ಳಿ ಹಾಡಿಗೆ ಸರವಣ ಸುಬ್ರಮಣಿಯಂ ಅವರು ಸಿನಿಮಾಗೆ ಸಂಗೀತ ನೀಡಿದ್ದಾರೆ. ಐಶ್ವರ್ಯ ರಂಗರಾಜನ್ ಅವರು ಧ್ವನಿ ನೀಡಿದ್ದಾರೆ.
ಸಾಯಿ ಶಶಿಕುಮಾರ್ ಅವರು ಧರ್ಮಂ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ವಿರಾಣಿಕ ಶೆಟ್ಟಿ ಅವರು ನಾಯಕಿ ಆಗಿದ್ದಾರೆ. ನಾಗಶೆಟ್ಟಿ ಅವರು ಈ ಸಿನಿಮಾಗೆ ಛಾಯಾಗ್ರಹಣ
ಮಾಡಿದ್ದಾರೆ ಬಾಲ ಮಾಸ್ಟರ್ ಹೆಜ್ಜೆ ಹಾಕಿಸಿದ್ದಾರೆ.



