ಬೊಕೊರೊ: ಭಾರಿ ಅನಾಹುತ ಸಂಭವಿಸಬೇಕಿದ್ದ ರೈಲು ದುರಂತ ತಪ್ಪಿರುವ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.ರೈಲ್ವೇ ಅಧಿಕಾರಿಯೊಬ್ಬರ ಪ್ರಕಾರ ಬೊಕಾರೊದಲ್ಲಿ ನಿನ್ನೆ ಸಂಜೆ ನವದೆಹಲಿ-ಭುವನೇಶ್ವರ ರಾಜಧಾನಿ ಎಕ್ಸ್‍ಪ್ರೆಸ್ ಸಾಗುತ್ತಿದ್ದಾಗ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್ ಬಳಿ ಟ್ರ್ಯಾಕ್ಟರ್ ರೈಲ್ವೆ ಗೇಟ್‍ಗೆ ಅಪ್ಪಳಿಸಿತ್ತು ಈ ಸಂದರ್ಭದಲ್ಲಿ ಆಗಬಹುದಾಗಿದ್ದ ದೊಡ್ಡ ರೈಲು ಅಪಘಾತವನ್ನು ತಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೊಕಾರೊ ಜಿಲ್ಲೆಯ ಭೋಜುದಿಹ್ ರೈಲು ನಿಲ್ದಾಣದ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್‍ನಲ್ಲಿ ರೈಲುಮಾರ್ಗವನ್ನು ಮುಚ್ಚುತ್ತಿದ್ದಾಗ ಟ್ರ್ಯಾಕ್ಟರ್ ರೈಲ್ವೇ ಗೇಟ್‍ಗೆ ಅಪ್ಪಳಿಸಿತು.ತಕ್ಷಣ ರೈಲು ಚಾಲಕ ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದರಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಲಿಲ್ಲ ಎಂದು ಆಗ್ನೇಯ ರೈಲ್ವೆ ಅದ್ರಾ ವಿಭಾಗದ ಮುಖ್ಯಸ್ಥ ಮನೀಶ್ ಕುಮಾರ್ ತಿಳಿಸಿದ್ದಾರೆ.
ರೈಲ್ವೆ ಗೇಟ್‍ಗೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಮತ್ತು ಗೇಟ್ ಮ್ಯಾನ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Leave a Review