ಪೀಣ್ಯ ದಾಸರಹಳ್ಳಿ: ಸೌಂದರ್ಯಗೀತ ಕವನ ಸಂಕಲನ ಬಿಡುಗಡೆ ಬೆಂಗಳೂರು ಬ್ರೈನ್ ಸೆಂಟರ್ ಶಿಕ್ಷಣ ಸಂಶೋಧನಾ ಕೇಂದ್ರ ಬಾಗಲಗುಂಟೆ ಎಂಇ ಐ ಕ್ರೀಡಾಂಗಣದಲ್ಲಿ ಬ್ರೈನ್ ಸೆಂಟರ್ ಹಾಗೂ ಬ್ಲಾಸಂಸ್ ಶಾಲೆ ಆಯೋಜಿಸಿದ ‘ಬ್ಲಾಸಂಸ್ ಕಲೋತ್ಸವ’ ದಲ್ಲಿ ಆ ಶಾಲೆಯ ಶಿಕ್ಷಕ ಗೀತಾ ವಿ.ಆರ್ ಅವರು ರಚಿಸಿದ ಸೌಂದರ್ಯ ಗೀತಾ ಕವನ ಸಂಕಲನವನ್ನು ಕರ್ನಾಟಕ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿಗಳು ಡಿ. ಶಶಿಕುಮಾರ್ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು ‘ಈಗಿನ ಮಕ್ಕಳಲ್ಲಿ ಹೆಚ್ಚಿನ ಮೌಲ್ಯ, ಶಿಕ್ಷಣ ಹಾಗೂ ಸಾಹಿತ್ಯದ ಅಭಿಮಾನವನ್ನು ತುಂಬಬೇಕು . ಸಾಹಿತ್ಯದ ಬಗ್ಗೆ ಹೆಚ್ಚು ಒಲವು ಮೂಡಿಸಬೇಕು. ಮಕ್ಕಳಿಗೆ ಅದರ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಶಿಕ್ಷಕರ ಕರ್ತವ್ಯ.ಪ್ರತಿಭೆಗಳಿಗೆ ನಮ್ಮ ಶಾಲೆಯಲ್ಲಿ ಪ್ರೋತ್ಸಾಹವಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾನೂನು ಮತ್ತು ನೀತಿ ಸಲಹೆಗಾರ ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾನಿಲಯದ ರಿಷಿಕೇಶ್, ಚಲನಚಿತ್ರ ನಟಿ ಎಚ್.ಎಮ್. ಮೀನಾಕ್ಷಿ, ಸುನಂದಾ ಕಲ್ಬುರ್ಗಿ, ನರಸಿಂಹಾಚಾರ್ ಹಾಗೂ ಮುಖ್ಯ ಗಣ್ಯರುಗಳು ಉಪಸ್ಥಿತರಿದ್ದರು. ಎಲ್ಲಾ ಪೋಷಕರು ಮಕ್ಕಳು, ಸಾರ್ವಜನಿಕರು ಕ್ಯಾಮ್ಸ್ ನಾ ಎಲ್ಲ ಸದಸ್ಯರುಗಳು ಇದ್ದರು.