ಹೊಸಕೋಟೆ: ನಗರ ಆರೋಗ್ಯ ಪ್ರಾಥಮಿಕ ಕೇಂದ್ರ ಮತ್ತು ನಗರಸಭೆ ಹೊಸಕೋಟೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ -2024 ಅನ್ನು ಹೆಚ್ಚು“ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧದಹೋರಾಟವನ್ನು ತೀವ್ರಗೊಳಿಸೋಣ” ಎಂಬ ಘೋಷವಾಕ್ಯದೊಂದಿಗೆ ನಗರಸಭೆಯ ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತ್ತು ಸದಸ್ಯರಿಗೆ ಅರಿವು ಮೂಡಿಸುವ ಕಾರ್ಯಗಾರವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಹಿರಿಯಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ್ ರವರು ಮಾತನಾಡಿ ತಾಲೂಕಿನಾದ್ಯಂತ ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ಬಹಳಷ್ಟು ಪ್ರದೇಶಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೆ ಸೊಳ್ಳೆ ಉತ್ಪತ್ತಿ ತಾಣಗಳು ಹೆಚ್ಚಾಗುತ್ತದೆ ಇದರಿಂದ ಸೋಂಕಿತ ಅನಾಫಿಲಿಸ್ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವ ಸಂಭವವಿರುತ್ತದೆ, ಅನಾಫಿಲಿಸ್ ಸೊಳ್ಳೆಯು ತನ್ನ ಸಂತಾನೋತ್ಪತ್ತಿಯನ್ನು ಕೆರೆ, ಕುಂಟೆ ಬಾವಿ, ಕೃಷಿ ಹೊಂಡ, ಭತ್ತದ ಗದ್ದೆಯಂತಹ ನೀರಿನ ಮೂಲಗಳಿಂದ ಉತ್ಪತ್ತಿಗೊಂಡು,
ಸೋಂಕಿತ ಸೊಳ್ಳೆಯು ಒಬ್ಬರಿಂದ ಒಬ್ಬರಿಗೆ ಕಚ್ಚುವುದರಿಂದ ಮಲೇರಿಯಾ ಹರಡುವುದು, ಮಲೇರಿಯಾ ರೋಗದ ರೋಗಲಕ್ಷಣಗಳಾದ ಚಳಿ ನಡುಕ, ತೀವ್ರತರವಾದ ಜ್ವರ, ಬೆವರುವುದು ವಾಕರಿಕೆ ಕಂಡುಬರುತ್ತದೆ ಈ ಲಕ್ಷಣಗಳು ಇದ್ದಾಗ ತಕ್ಷಣ ರಕ್ತ ಪರೀಕ್ಷೆ ಮಾಡಿಸುವುದರ ಮುಖೇನ ಶೀಘ್ರ ಪತ್ತೆ ಹಚ್ಚಿ ಸಂಪೂರ್ಣ ಚಿಕಿತ್ಸೆಯಿಂದ ಮಲೇರಿಯಾ ರೋಗವನ್ನು ಗುಣಪಡಿಸಬಹುದಾಗಿದೆ, ನಿಂತ ನೀರಿನಲ್ಲಿ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗುವ ಸಂಭವವಿರುವುದರಿಂದ ಮನೆಯಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು, ನೀರಿನ ಸಂಗ್ರಹಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಿ ಬಿಸಿಲಿನಲ್ಲಿಟ್ಟು ಒವಣಗಿಸಿ ನಂತರ ನೀರು ತುಂಬಿಸಿ ಸುರಕ್ಷಿತವಾಗಿ ಮುಚ್ಚಿಡಬೇಕು, ಅನಾವಶ್ಯಕ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವುದು, ಹೊಂಡಗಳು, ಬಳಸದ ಬಾವಿಗಳು ಇನ್ನಿತರೆ ನಿಲ್ಲುವ ತಾಣಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಸೊಳ್ಳೆ ಉತ್ಪತ್ತಿಯ ತಾಣಗಳಾಗದಂತೆ ಎಚ್ಚರವಹಿಸಬೇಕು.
ಇನ್ನು ಸೊಳ್ಳೆ ಕಡಿತದಿಂದ ಪಾರಾಗಲು ಹಗಲು ಹೊತ್ತಿನಲ್ಲಿಯೂ ಸಹ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು, ಉದ್ದನೆಯ ತೋಳಿನ ಅಂಗಿಗಳನ್ನು ಧರಿಸುವುದು, ಕಿಟಕಿಗಳಿಗೆ ಸೊಳ್ಳೆ ನಿರೋಧಕ ಮೆಶ್ ಅಳವಡಿಸುವುದು, ಸಂಜೆ ಹೊತ್ತಿನಲ್ಲಿ ಹೊಗೆ ಹಾಕುವುದು, ಸೊಳ್ಳೆ ತಾಣಗಳನ್ನು ನಿರ್ಮೂಲನೆ ಮಾಡುವುದರ ನಿಟ್ಟಿನಲ್ಲಿ ಸಕ್ರಿಯರಾದರೆ ಮಲೇರಿಯಾವನ್ನು ಹತೋಟಿಗೆ ತರಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿಡೆಂಗಿ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರುವುದು ಮತ್ತುಮನೆಯಲ್ಲಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ನೀರು ಸಂಗ್ರಹಣೆ ಮಾಡುವ ಪರಿಕರಗಳ ಮೇಲೆ ಹೆಚ್ಚಿನ ಗಮನಹರಿಸಬೇಕು, ಒಂದು ವೇಳೆ ನೀರಿನಲ್ಲಿ ಲಾರ್ವ ಕಂಡು ಬಂದಲ್ಲಿ ನೀರನ್ನು ಚೆಲ್ಲುವುದು ಅಥವಾ ಸೋಸುವಿಕೆಯಿಂದ ಲಾರ್ವ ನಾಶಪಡಿಸಬೇಕು.
ವಿಶೇಷವಾಗಿ ತೆಂಗಿನ ಚಿಪ್ಪು, ವಾಹನಗಳ ಟೈರುಗಳಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟಬೇಕು. ಜ್ವರ ಪ್ರಕರಣಗಳು ಕಂಡು ಬಂದಲ್ಲಿ ನಿರ್ಲಕ್ಷ್ಯ ವಹಿಸದೆ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಮತ್ತು ಸೂಕ್ತ ಚಿಕಿತ್ಸೆಯನ್ನ ಪಡೆದುಕೊಂಡು ಗುಣಮುಖರಾಗಬೇಕು ಅಲ್ಲದೆ ಆರೋಗ್ಯ ಇಲಾಖೆಯಿಂದ ಕೈಗೊಳ್ಳುವಲಾರ್ವ ಸಮೀಕ್ಷೆ ಮತ್ತು ಆರೋಗ್ಯ ಶಿಕ್ಷಣನೀಡುವ ಕಾರ್ಯಗಳಿಗೆ ಸಹಕರಿಸಿ ಮಲೇರಿಯಾ ಮತ್ತು ಡಿಂಗಿ, ಚಿಕೂನ್ ಗುನ್ಯಾ ಸಾಂ
ಕ್ರಾಮಿಕ ರೋಗಗಳಿಂದ ಮುಕ್ತರಾಗುವಂತೆ ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಗರಸಭೆಯ ಪೌರಾಯುಕ್ತರಾದ ಜಾಹಿರ್ ಅಬ್ಬಾಸ್ರವರು ಈಗಾಗಲೇ ನಗರದಲ್ಲಿದಿನನಿತ್ಯ ಕಸ ಸಂಗ್ರಹಣ ವಾಹನಗಳಲ್ಲಿಆಡಿಯೋ ಕ್ಲಿಪ್ಪಿಂಗ್ ಮುಖೇನ ಸಾರ್ವಜನಿಕ ರಿಗೆ ಅರಿವು ಮೂಡಿಸಲಾಗುತ್ತಿದ್ದು, ಆರೋಗ್ಯಇಲಾಖೆ ಈಗಾಗಲೇ ತಿಂಗಳಲ್ಲಿ ಮೊದಲನೇ ಮತ್ತು ಮೂರನೇ ಶುಕ್ರವಾರದಂದು ಕೈಗೊಳ್ಳುತ್ತಿರುವ ಲಾರ್ವ ಸಮೀಕ್ಷೆಗೆ ಮೆಚ್ಚುಗೆ ವ್ಯಕ್ತಪಡಿಸಿ, ರಾಷ್ಟ್ರೀಯ ರೋಗವಾಹಕ ಆರ್ಥಿಕ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕೈಗೊಳ್ಳುವ ಕಾರ್ಯಗಳಿಗೆ ಮತ್ತು ಆರೋಗ್ಯ ಇಲಾಖೆಯಿಂದ ಕೈಗೊಳ್ಳುವ ಸ್ವಚ್ಛತೆ ನೈರ್ಮಲ್ಯ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೂ ಸಹ ನಗರಸಭೆಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಮುಂದಿನ ದಿನಗಳಲ್ಲಿಯೂ ಸಹ ಆರೋಗ್ಯ ಇಲಾಖೆ ಮತ್ತು ಪೌರಾಡಳಿತ ಇಲಾಖೆ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಿ ಸಾಂಕ್ರಾಮಿಕ ರೋಗಗಳ ತಡೆಗೆ ಸಹಕಾರಿ ಯಾಗೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ: ಸುಷ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಕುಮಾರ್, ನಗರ ಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಅಂಜಿನಪ್ಪ ಮತ್ತು ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಹಾಜರಿದ್ದರು.