ಬೆಂಗಳೂರು: `ಎರಡನೇ ವಿಶ್ವ ಕನ್ನಡ ಹಬ್ಬ’ಕ್ಕೆ ಬೆಂಬಲ ಸೂಚಿಸಿದ ಸಚಿವ “ಬೈರತಿ ಸುರೇಶ್ “ರವರು ಕನ್ನಡ ನಾಡು ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸುವ ಸದುದ್ದೇಶದಿಂದ “ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್” ಸಂಸ್ಥೆ ಸಿಂಗಾಪುರದಲ್ಲಿ ಹಮ್ಮಿಕೊಂಡಿರುವ “ಎರಡನೇ ವಿಶ್ವ ಕನ್ನಡ ಹಬ್ಬ”ಕ್ಕೆ ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವರಾದ ಬೈರತಿ ಸುರೇಶ್ ರವರನ್ನು ಭೇಟಿ ಮಾಡಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಶಿವಕುಮಾರ್ ನಾಗರ ನವಿಲೆಯವರು “ಎರಡನೇ ವಿಶ್ವ ಕನ್ನಡ ಹಬ್ಬ”ದ ಸಂಪೂರ್ಣ ರೂಪುರೇಶೆಗಳನ್ನು ಸಚಿವರಿಗೆ ವಿವರಿಸಿದರು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಮಹತ್ತರವಾದ ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು , ಕನ್ನಡ ಕಾರ್ಯಕ್ರಮಕ್ಕೆ ಸದಾ ನಮ್ಮ ಸಹಕಾರವಿದ್ದು, ಒಟ್ಟಾಗಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು. ಈ ಸಂದರ್ಭದಲ್ಲಿ ಚೈತ್ರಾ, ನಟಿ ರೂಪಿಕಾ, ಕಲಾ ನವೀನ್, ಕಿಶೋರ್ ಕುಮಾರ್, ಪ್ರತಿಭಾ ಪಟವರ್ಧನ್ ಮುಂತಾದವರು ಜೊತೆಗಿದ್ದರು.