ಬೆಂಗಳೂರು ವಿಧಾನ ಸೌಧ ದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 334 ರಲ್ಲಿ ನಡೆದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಪ್ರವರ್ಗ-1 ರ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಸಭೆಯಲ್ಲಿ ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ರವರಿಗೆ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ವತಿಯಿಂದ ಅಲೆಮಾರಿ ಸಮುದಾಯಕ್ಕೆ ವಸತಿ ನಿವೇಶನ,
ಉಚಿತ ಶಿಕ್ಷಣ, ಭೂಖರೀದಿ ಯೋಜನೆ, ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎನ್ನುವ ವಿವಿಧ 12 ಬೇಡಿಕೆಗಳುಳ್ಳ ಮನವಿ ಪತ್ರವನ್ನು ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಪ್ರಕಾಶ್ ಎಂ ಬೆಂಗಳೂರುರವರ ನೇತೃತ್ವದಲ್ಲಿ ಕೋಶಾಧಿಕಾರಿ ಹುಲ್ಲಪ್ಪ ಅಪ್ಪಣ್ಣ ಜಾಡರ್ ಹಾವೇರಿ, ಉಪಾಧ್ಯಕ್ಷರಾದ ರಾಜೇಂದ್ರ ಲಕ್ಷ್ಮಣ್ ಬೈಲ್ ಪತ್ತಾರ್ ಗದಗ,
ನಿರ್ದೇಶಕರಾದ ಮಂಜುನಾಥ್ ಮೈಸೂರು, ಶುಭಾಸ್ಚಂದ್ರ ಬೈಲ್ ಪತ್ತಾರ್ ಲಿಂಗಸೂರು, ಕುಮಾರ್ ಕೆ. ಎನ್ ಬೆಂಗಳೂರು, ಮತ್ತಿತರರು ಉಪಸ್ಥಿತರಿದ್ದು ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ನೀಡಲಾಯಿತು, ಮುಖ್ಯ ಮಂತ್ರಿಗಳು ಮನವಿ ಪತ್ರವನ್ನು ಓದಿ ಪರಿಗಣಿಸುವ ಭರವಸೆ ನೀಡಿದರು.