This is the title of the web page
This is the title of the web page

116 ಮಕ್ಕಳಿಗೆ ಡಾ. ಶ್ರೀಶಿವಕುಮಾರ ಸ್ವಾಮಿಗಳ ಹೆಸರಿಡುವ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮಿಗಳವರ ಸ್ಮರಣಾರ್ಥ ಏಪ್ರಿಲ್ 1 ರಂದು, 116ನೇ ಹುಟ್ಟುಹಬ್ಬ ನಡೆಯಲಿದೆ. ಅಂದು 116 ಮಕ್ಕಳಿಗೆ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಹೆಸರನ್ನು ಇಡುವ ನಾಮಕರಣ ಮಹೋತ್ಸವ ಕಾರ್ಯಕ್ರಮವನ್ನು ಶ್ರೀ. ಸಿದ್ದಗಂಗಾ ಮಠದಲ್ಲಿ ಆಯೋಜಿಸಲಾಗುತ್ತಿದೆ ಎಂದು ಶ್ರೀ. ಶಿವಕುಮಾರ ಮಹಾಸ್ವಾಮಿ ಅನ್ನದಾನ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಜಯಣ್ಣ ಅವರು ತಿಳಿಸಿದ್ದಾರೆ.

ನಾಮಕರಣ ಹೊಂದುವ ಮಗುವಿಗೆ ತೊಟ್ಟಿಲು, ಹೊಸ ಉಡುಪು, ತೊಟ್ಟಿಲ ಹೊಸ ಹಾಸಿಗೆ ನೀಡಲಾಗುವುದು. ನವಜಾತ ದಿನದಿಂದ 1 ವರ್ಷ ದೊಳಗಿನ ಮಕ್ಕಳಿಗೆ ಪ್ರವೇಶ ಅವಕಾಶವಿದೆ. ಈ ಮಕ್ಕಳ ಪೋಷಕರು ವಿಳಾಸದ ಪುರಾವೆ ಮತ್ತು ಭಾವಚಿತ್ರ, ಮಗುವಿನ ಬರ್ತ್ ಸರ್ಟಿಪಿಕೇಟ್ ನೊಂದಿಗೆ ಅರ್ಜಿ ನಮೂನೆ ಸಲ್ಲಿಸುವುದು.

ಈಗಾಗಲೇ ನಾಮಕರಣ ಮಾಡಿರುವ ಮಕ್ಕಳಿಗೆ ಮರು ನಾಮಕರಣ ಅವಕಾಶವಿಲ್ಲ. ಮಗುವಿನ ವೈದ್ಯಕೀಯ ಪಾಲನಾ ವಿವರ ಒದಗಿಸಬೇಕು ಮಾಚ್ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಆಸಕ್ತರು ಮೊ:89513 05174 ಸಂಪರ್ಕಿಸಲು ಕೋರಲಾಗಿದೆ.