ದೇವನಹಳ್ಳಿ : ಸಂವಿಧಾನವನ್ನು ಭಾರತೀಯರಾದ ಪ್ರತಿಯೊಬ್ಬ ಪ್ರಜೆಗಳು ಗೌರವಿಸಬೇಕು, ಇಂದಿನ ರಾಜಕಾರಣದಲ್ಲಿ ಸಂವಿಧಾನಕ್ಕೆ ಅಗೌರವ ಬರುತ್ತಿದೆ ಆದ್ದರಿಂದ ಅದರ ರಕ್ಷಣೆ ಮಾಡುವ ಸಲುವಾಗಿ ನಮ್ಮ ನೂತನ ಸಂವಿಧಾನ ರಕ್ಷಣಾ ಸಮಿತಿ ತಲೆ ಎತ್ತಿದೆ ಎಂದು ನೂತನ ರಾಜ್ಯಾಧ್ಯಕ್ಷ ಹೆಚ್.ನರಸಿಂಹಯ್ಯ ತಿಳಿಸಿದರು.
ಅವರು ಪಟ್ಟಣದ ಪರಿವೀಕ್ಷಣಾ ಮಂದಿರದ ಸಕ್ರ್ಯೂಟ್ ಹೌಸ್ನಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಮಿತಿಯಲ್ಲಿ ಎಲ್ಲಾ ಜಾತಿ, ಎಲ್ಲಾ ಧರ್ಮದ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು, ಒಂದು ಸೇನೆಯ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ, ಎಲ್ಲಿಯೇ ಆಗಲಿ ಸಂವಿಧಾನಕ್ಕೆ ದಕ್ಕೆ ಬಂದರೆ ಯಾವುದೇ ಮುಲಾಜಿಲ್ಲದೆ ಅವರ ವಿರುದ್ದ ಧ್ವನಿ ಎತ್ತಿ ಹೋರಾಟ ಮಾಡಲಾಗುವುದು, ನಮ್ಮ ಸೇನೆ ಎಲ್ಲಿಯೂ ಕೈಚಾಚದೆ ಬಡವರಿಗೆ ಅನ್ಯಾಯವಾದಾಗ ಅಲ್ಲಿ ನಮ್ಮ ಸಮಿತಿ ನಿಂತು ನ್ಯಾಯ ಕೊಡಿಸುವ ಹಾಗೆ ಕೆಲಸ ಮಾಡಬೇಕು ಮುಂದಿನ ದಿನಗಳಲ್ಲಿ ರಾಜ್ಯಾಧ್ಯಂತ ಜಿಲ್ಲಾ ಮಟ್ಟದ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ಹಂತಮ ಹಂತವಾಗಿ ರಚಿಸಲಾಗುವುದು ಎಂದು.
ಚಾಮರಾಜನಗರದ ಮೈತ್ರಿ ಮಾತಾಜಿ ಬಂತೇಜಿ ಮಾತನಾಡಿ ಸಂವಿಧಾನ ರಕ್ಷಣೆ ಎಲ್ಲರ ಕರ್ತವ್ಯ ಅಂತಹ ಸಂವಿಧಾನದ ರಕ್ಷಣೆಗೋಸ್ಕರ ಸಮಿತಿ ಮಾಡಿರುವುದು ಸ್ವಾಗತಾರ್ಹ, ನರಸಿಂಹಯ್ಯ,ನರಸಿಂಹರಾಜುರವರ ಸಮ್ಮುಖದಲ್ಲಿ ಹೋರಾಟಗಳನ್ನು ರೂಪಿಸಿ ಭಗವಾನ್ ಬುದ್ದ ಹಾಗೂ ಡಾ|| ಬಿ.ಆರ್. ಅಂಭೇಡ್ಕರ್ ನಿಮ್ಮ ಜೊತೆಯಲ್ಲಿ ಇರುತ್ತಾರೆ ಯಾವುದೇ ಆಸೆ ಆಮಿಷಕ್ಕೆ ಒಳಗಾಗದಿರಿ ನಿಮಗೆಲ್ಲಾ ಶುಭವಾಗಲಿ ಎಂದು ತಿಳಿಸಿದರು.
ಮಹಿಳಾ ಕಾರ್ಯದರ್ಶಿ ಶ್ರೀಮತಿ ರವಿಕಲಾ ಮಾತನಾಡಿ ಸಂವಿಧಾನದಲ್ಲಿ ಯಾವುದೇ ಒಂದು ಜಾತಿಗೆ ಮೀಸಲಾತಿಯನ್ನು ಪ್ರಸ್ಥಾಪಿಸಿಲ್ಲ, ಡಾ|| ಬಿ.ಆರ್. ಅಂಬೇಡ್ಕರ್ ಎಲ್ಲಾ ಜಾತಿಗಳಿಗೂ ಮೀಸಲಾತಿಯನ್ನು ನಿಗದಿ ಪಡಿಸಲಾಗಿದೆ, ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕ ಬರಿ ಪರಿಶಿಷ್ಠರಿಗೆ ಅಲ್ಲ, ಆದ್ದರಿಂದ ಅಂಬೇಡ್ಕರ್ರವರ ಆಶಯಗಳನ್ನು ಮನವರಿಕೆ ಮಾಡಿಕೊಂಡು ಮುನ್ನಡೆಯಬೇಕು ಎಂದರು.
ನೂತನ ಪದಾಧಿಕಾರಿಗಳು:ಅಧ್ಯಕ್ಷ ; ಹೆಚ್.ನರಸಿಂಹಯ್ಯ, ಉಪಾಧ್ಯಕ್ಷ : ಎಂ.ಗೋಪಾಲಕೃಷ್ಣ, ಪ್ರ.ಕಾರ್ಯದರ್ಶಿ: ಎಂ. ನರಸಿಂಹರಾಜು, ಖಜಾಂಚಿ : ವಿ. ಮುನಿಕುಮಾರ್, ಸಹರ್ಕಾದರ್ಶಿಗಳಾಗಿ : ಶ್ರೀನಾಥ್ ಬೈರೇಗೌಡ, ಎನ್.ಬಿ.ಮಂಜುನಾಥ್, ರಾಮಣ್ಣ ಮತ್ತಿಹಳ್ಳಿ, ಚಿದಾನಂದಮೂರ್ತಿ ಚಿಕ್ಕನಾಯಕನಹಳ್ಳಿ, ಪಿ.ನಂಜಪ್ಪ ರಾಮಗೊಂಡನಹಳ್ಳಿ, ಮೀನಾಕುಮಾರಿ ಕೆ.ವಿ., ಎಂ. ಮುನಿರಾಜು, ನಾರಾಯಣ ಆರ್.ಬಿ., ನಾಗಮಣಿ ಎ., ಬಂಗಾರಪ್ಪ, ರವಿಕಲಾ, ಜಯಲಕ್ಷ್ಮಿ, ಎ.ಎಂ. ನಾರಾಯಣಸ್ವಾಮಿ, ಚಿ.ಮಾ. ನಾರಾಯಣಸ್ವಾಮಿ, ಚಂದ್ರಕಲಾ, ಆನಂದ, ಹೇಮರಾಜ್ ವೀರಾಪುರ ನೇಮಕಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಿ.ಮುನಿ ಯಪ್ಪ,ಹೆಚ್.ಕೆ. ವೆಂಕಟೇಶಪ್ಪ, ಮಂಜುನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು.