ಕನಕಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಪದಾಧಿಕಾರಿಗಳ ನೇಮಕವನ್ನು ರಾಜ್ಯ ಸಮಿತಿಯ ಆದೇಶದ ಮೇರೆಗೆ ಸಾಮೂಹಿಕ ನಾಯಕತ್ವದಲ್ಲಿ ಹೋಬಳಿವಾರು ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ನೂತನ ತಾಲೂಕು ಅಧ್ಯಕ್ಷ ಮರಳೇಬೇಕುಪ್ಪೆ ಕೃಷ್ಣಪ್ಪ ತಿಳಿಸಿದರು.
ಶುಕ್ರವಾರ ನಗರದ ಬೂದಿಕೆರೆಯಲ್ಲಿನ ಸಂಘದ ಕಚೇರಿಯಲ್ಲಿ ರೈತ ಸಂಘದ ಸಭೆಯಲ್ಲಿ ಮಾತನಾಡಿದ ಅವರು ಈ ದಿನ ಸಂಘದ ಸದಸ್ಯರ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಎಲ್ಲರ ಅಭಿಪ್ರಾಯದ ಮೇರೆಗೆ ಪುನರ್ ಸಂಘಟನೆಗೆ ದೃಷ್ಟಿಯಿಂದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯಕಾರಿ ಮಂಡಳಿ, ಪ್ರಧಾನ ಕಾರ್ಯದರ್ಶಿ ಮಂಡಳಿ ಸೇರಿದಂತೆ ಹಿರಿಯ ಮತ್ತು ಕಿರಿಯ ಸಂಚಾಲಕ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದರು.
ನೂತನ ತಾಲೂಕು ಅದ್ಯಕ್ಷರಾಗಿ 5 ಮಂದಿಯಲ್ಲಿ ಮರಳೇ ಬೇಕುಪ್ಪೆ. ಕೃಪ್ಣಪ್ಪ, ಶಿವಗೂಳಿಗೌಡ, ರಾಜು, ದೊಡ್ಡಯ್ಯ, ಶಿವರಾಜು., ತಾಲ್ಲೂಕು ಉಪಾದ್ಯಕ್ಷರಾಗಿ ಪುಟ್ಟಸ್ವಾಮಿ, ನಾರಯಣ್, ಮಹದೇವಯ್ಯ, ಕಾರ್ಯಕಾರಣಿ ಶಂಕರೇಗೌಡ, ವೆಂಕಟೇಶ್, ನಿಂಗೇಗೌಡ, ಚನ್ನಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಸುರೇಶ್, ಅನುಕುಮಾರ್, ಕಾಡಹಳ್ಳಿ ಸತೀಶ್, ಕುಮಾರ್, ಸಂಚಾಲಕರಾಗಿ ಚಿಕ್ಕಣ್ಣ, ಶೇಖರ್, ತಿಬಯ್ಯ, ಚೇನ್ನಿಗೇಗೌಡ ಆಯ್ಕೆಯಾಗಿದ್ದಾರೆ.
ತಾಲೂಕಿನಲ್ಲಿ ರೈತರಿಗೆ ಹಾಗೂ ಶ್ರೀಸಾಮನ್ಯರಿಗೆ ಆಗುತ್ತಿರುವ ಅನ್ಯಾಯ, ಸರ್ಕಾರಿ ಅಧಿಕಾರಿಗಳ ದೌರ್ಜನ್ಯ , ದಬ್ಬಾಳಿಗೆ ಹಾಗೂ ರೈತರನ್ನು ನಿತ್ಯ ಸಾರ್ವಜನಿಕ ಕೆಲಸಕ್ಕೆ ಅಲೆದಾಡುವವರ ವಿರುದ್ಧ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.