೧೨ರಂದು ರಾಜ್ ಪುಣ್ಯಸ್ಮರಣೆ…
೨೪ರಂದು ರಾಜ್ ಹುಟ್ಟು ಹಬ್ಬ..,
ಹುಟ್ಟುಹಬ್ಬವನ್ನು ಸರಕಾರದ ಮಟ್ಟದಲ್ಲಿಯೇ ಆಚರಿಸಲಾಗುತ್ತಿದೆ. ತಮ್ಮ ಕಂಠಸಿರಿಯಿಂದ ಜನಮನ ಸೂರೆಗೊಂಡಿರುವ ಹೆಸರಾಂತ ಗಾಯಕ ರಾಮಚಂದ್ರ ಹಡಪದ ಅವರು ರಾಜಕುಮಾರ್ ನೆನಪಿನಲ್ಲಿ ಸೊಗಸಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ.
ಐದನೇ ತಾರೀಕು ಸಂಜೆ ಐದು ಗಂಟೆಗೆ ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್್ಸ ಸಭಾಂಗಣದಲ್ಲಿ ರಾಜಕುಮಾರ್ ಕಂಠಸಿರಿಯಿಂದ ಹೊರಹೊಮ್ಮಿದ ಚಿತ್ರಗೀತೆಗಳ ಮೃದು ಮಧುರ ಪ್ರಸ್ತುತಿ ಅನಾವರಣಗೊಳ್ಳಲಿದೆ.
ಗಾಯಕ ರಾಮಚಂದ್ರ ಹಡಪದರೊಂದಿಗೆ ದಿವ್ಯಾ ರಾಘವನ್, ಆರ್ ಕೆ ಸ್ಪರ್ಶ, ಶ್ವೇತಾ ಹಿರೇಮಠ, ಹರ್ಷ ರಂಜನಿ, ವಿಕಾಸ್ ವಸಿಷ್ಠ ಅವರ ಕಂಠಗಳೂ ಸಭಾಂಗಣದಲ್ಲಿ ಅನುರಣಿಸಲಿವೆ. ರಾಘವೇಂದ್ರ ಕಾಂಚನ್ ನಿರೂಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅನೇಕ ಚಲನಚಿತ್ರ ಕಲಾವಿದರು ತಂತ್ರಜ್ಞರ ಉಪಸ್ಥಿತಿ ಇರಲಿದೆ.
ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶಿತ ಆಗುವ ಚಲನಚಿತ್ರಗಳು ಮಾರ್ಚ್ ೧೫ ರಿಂದ ಕಡ್ಡಾಯವಾಗಿ ಶ್ರವಣ ದೋಷ ಹೊಂದಿರುವ ಮತ್ತು ನೇತ್ರದೋಷ ಇರುವ ವಿಕಲಾಂಗರೂ ವೀಕ್ಷಿಸಲು ಅನುಕೂಲ ವಾಗುವಂತೆ ಎಡಿಸಿಸಿ ಮತ್ತು ಕ್ಲೋಸ್ ಕ್ಯಾಪ್ಷನ್ ಅಳವಡಿಸಲು ಕೇಂದ್ರ ಸರಕಾರ ಸೂಚಿಸಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಈ ಪರಿಕ್ರಮ ದ ಕುರಿತು ತಿಳುವಳಿಕೆ ನೀಡಲು ನಗರದಲ್ಲಿ ಸಂವಾದ ಕಾರ್ಯಕ್ರಮ ಆಯೋಜಿತಗೊಂಡಿತ್ತು. ಪ್ರಾದೇಶಿಕ ಚಲನಚಿತ್ರ ಪ್ರಮಾಣಿಕರಣ ಮಂಡಳಿ ಸಂವಾದ ವ್ಯವಸ್ಥೆ ಗೊಳಿಸಿದ್ದು ಪ್ರಾದೇಶಿಕ ಅಧಿಕಾರಿ ಯಶವಂತ ಶಹನಾಯ್ ಗೋಷ್ಠಿ ನಿರ್ವಹಣೆ ಮಾಡಿದರು. ಪ್ರಾದೇಶಿಕ ಪ್ರಮಾಣಿಕರಣ ಅಧಿಕಾರಿ ಶ್ರೀ ಯಶ್ ಉಪಸ್ಥಿತರಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕ ಸಂಘ ಮತ್ತು ನಿರ್ದೇಶಕರ ಸಂಘ ದ ಪ್ರತಿನಿಧಿಗಳು ಪಾಲ್ಗೊಂಡರು.
ಏಪ್ರಿಲ್ ಎಂದರೆ ಡಾ.ರಾಜಕುಮಾರ್ ನೆನಪು ನುಗ್ಗಿ ಬರುತ್ತದೆ



