ನವದೆಹಲಿ: ಭಾರತದ ಪುರುಷರ ಮತ್ತು ಮಹಿಳೆಯರ ಆರ್ಚರಿ ತಂಡವು ವಿಶ್ವ ರ್ಯಾಂಕಿಂಗ್ ಆಧಾರದ ಮೇಲೆ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಕೋಟಾ ಗಳಿಸಿದೆ.
12 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತವು ಪೂರ್ಣ ಆರು ಆಟಗಾರರ ಆರ್ಚರಿ ತಂಡವನ್ನು ಒಲಿಂಪಿಕ್ಸ್ಗೆ ಕಳುಹಿಸಲಿದ್ದು, ಪ್ಯಾರಿಸ್ ಕ್ರೀಡಾಕೂಟದ ಎಲ್ಲಾ ಐದು ವಿಭಾಗಗಳಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದೆ.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತ ಕೊನೆಯ ಬಾರಿಗೆ ಆರು ಮಂದಿಯ ತಂಡವನ್ನು ಕಣಕ್ಕಿಳಿಸಿತ್ತು. ಟೋಕಿಯೊ ಒಲಿಂಪಿಕ್ಸ್ನಲ್ಲಿ ಮಿಶ್ರ ತಂಡ ಸ್ಪರ್ಧೆಯನ್ನು ಪರಿಚಯಿಸಲಾಯಿತು. ಒಲಿಂಪಿಕ್ಸ್ನಲ್ಲಿ ಭಾರತವು ಆರ್ಚರಿಯಲ್ಲಿ ಇದುವರೆಗೂ ಪದಕ ಗೆದ್ದಿಲ್ಲ.
ಪುರುಷರ ವಿಭಾಗದಲ್ಲಿ ಭಾರತ ಮತ್ತು ಚೀನಾ ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ ಇಂಡೊನೇಷ್ಯಾ ತಂಡ ಒಲಿಂಪಿಕ್ ಕೋಟಾವನ್ನು ಪಡೆದ ಎರಡನೇ ರಾಷ್ಟ್ರವಾಗಿದೆ.ತಂಡ ಸ್ಪರ್ಧೆಗಳಲ್ಲಿ ಪ್ರತಿ ವಿಭಾಗದಲ್ಲಿ 12 ತಂಡಗಳು ಇರಲಿದ್ದು, ಮಿಶ್ರ ಸ್ಪರ್ಧೆಗಳಲ್ಲಿ ಐದು ತಂಡಗಳು ಸ್ಪರ್ಧಿಸಲಿವೆ.