ಯೆಚಿಯಾನ್ (ದಕ್ಷಿಣ ಕೊರಿಯಾ): ನಂ.1 ಹಾಗೂ ಹಾಲಿ ಚಾಂಪಿಯನ್ ಖ್ಯಾತಿಯ ಭಾರತದ ವನಿತಾ ಕಾಂಪೌಂಡ್ ತಂಡ ಆರ್ಚರಿ ವಿಶ್ವಕಪ್ ಸ್ಟೇಜ್-2 ಪಂದ್ಯಾ ವಳಿಯ ಫೈನಲ್ ಪ್ರವೇಶಿಸಿದೆ. ಆದರೆ ಪುರುಷರ ತಂಡ ಕಂಚಿನ ಪದಕವನ್ನೂ ಕಳೆದುಕೊಂಡು ನಿರಾಸೆ ಮೂಡಿಸಿತು.
ಜ್ಯೋತಿ ಸುರೇಖಾ ವೆನ್ನಮ್, ಪರ್ಣೀತ್ ಕೌರ್ ಮತ್ತು ಅದಿತಿ ಸ್ವಾಮಿ ಅವರನ್ನೊಳಗೊಂಡ ಭಾರತ ತಂಡ ಸೆಮಿಫೈನಲ್ನಲ್ಲಿ ವಿಶ್ವದ ನಂ.4 ಅಮೆರಿಕವನ್ನು 233-229 ಅಂಕ ಗಳಿಂದ ಹಿಮ್ಮೆಟ್ಟಿಸಿತು.ಶನಿವಾರದ ಫೈನಲ್ನಲ್ಲಿ ಭಾರತ ವಿಶ್ವದ ನಂ.7 ತಂಡವಾದ ಟರ್ಕಿಯನ್ನು ಎದುರಿಸ ಲಿದೆ. ಇನ್ನೊಂದು ಸೆಮಿಫೈನಲ್ನಲ್ಲಿ ಟರ್ಕಿ ಆತಿಥೇಯ ದಕ್ಷಿಣ ಕೊರಿಯಾ ವನ್ನು 236-234 ಅಂತರದಿಂದ ಪರಾಭವಗೊಳಿಸಿತು.
ಪುರುಷರಿಗೆ ಪದಕವಿಲ್ಲ: ಪ್ರಿಯಾಂಶ್, ಪ್ರಥಮೇಶ್ ಮತ್ತು ಹಿರಿಯ ಬಿಲ್ಗಾರ ಅಭಿಷೇಕ್ ವರ್ಮ ಅವರನ್ನು ಒಳಗೊಂಡ ಭಾರತದ ಪುರುಷರ ತಂಡ ಕಂಚಿನ ಪದಕ ಸ್ಪರ್ಧೆ ಯಲ್ಲಿ ಆಸ್ಟ್ರೇಲಿಯ ವಿರುದ್ಧ ಶೂಟ್-ಆಫ್ನಲ್ಲಿ ಸೋಲನುಭವಿಸಿತು.