ಕೂದಲನ್ನು ಮೃದುವಾಗಿಸಲು ಮತ್ತು ಪೋಷಿಸಲು ಕೂದಲಿಗೆ ಈ ಡಿಐವೈ (DIY) ಹೇರ್ ಮಾಸ್ಕ್ ಬಳಸಿಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಯುವಿ ಕಿರಣಗಳು, ತೇವಾಂಶ ಮತ್ತು ಮಾಲಿನ್ಯದ ಹಾನಿಕಾರಕ ಪರಿಣಾಮಗಳಿಂದ ನಿಮ್ಮ ಕೂದಲನ್ನು ರಕ್ಷಿಸಬೇಕು. ನಿತ್ಯ ಕೂದಲಿನ ಆರೈಕೆ ಮಾಡುವುದು ಮುಖ್ಯ. ಮೇಲೆ ಹೇಳಿದ ಕಾರಣಗಳಿಂದಾಗಿ ಕೂದಲು ಸಾಮಾನ್ಯವಾಗಿ ಮಂದ ಮತ್ತು ಶುಷ್ಕವಾಗುತ್ತದೆ ಮತ್ತು ಮುರುಟುತ್ತದೆ.
ಇದಲ್ಲದೆ, ಗಡಸು ನೀರು ಬಿದ್ದರೆ ಇನ್ನಷ್ಟು ಹಾನಿಯಾಗುತ್ತದೆ. ನಿಮ್ಮ ಕೂದಲು ಮಂದವಾಗುತ್ತದೆ, ಸೀಳುತ್ತದೆ.ಮುರುಟುವಿಕೆಯನ್ನು ನಿಯಂತ್ರಿಸಲು ಮತ್ತು ನಿಮ್ಮ ಕೂದಲಿಗೆ ಉತ್ತಮ ಪೋಷಣೆಯನ್ನು ಒದಗಿಸಲು ಪರಿಣಾಮಕಾರಿ ಮಾರ್ಗವೆಂದರೆ ನಿತ್ಯ ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚುವುದು. ಮಾರುಕಟ್ಟೆಯಲ್ಲಿ ಹಲವಾರು ಹೇರ್ ಆಯಿಲ್ ಆಯ್ಕೆಗಳಿದ್ದರೂ, ನಿಮ್ಮ ಕೂದಲಿಗೆ ಸರಿಯಾದ ಅಂಶಗಳು ಇವೆಯೋ ಇಲ್ಲವೋ ಎಂದು ನೀವು ಎಚ್ಚರದಿಂದ ನೋಡಿ ಆರಿಸಬೇಕಾಗುತ್ತದೆ.
ಅಂತಹ ಒಂದು ಅಂಶವೆಂದರೆ ಅಲೋ ವೆರಾ. ಅನೇಕ ಜನರು ವರ್ಷಗಳಿಂದಲೂ ಬೇಸಿಗೆಯ ಕಾಲದಲ್ಲಿ ನೆಚ್ಚಿರುವಂತಹದು!ತೆಂಗಿನೆಣ್ಣೆ ಆಧಾರಿತ ಕೇಶ ತೈಲದ ಜೊತೆ ಅಲೋವೆರಾದ ಈ ವಿಶಿಷ್ಟ ಮಿಶ್ರಣ, ನಿಮ್ಮ ಕೂದಲಿನ ಕೆಳಗೆ 10 ಪದರಗಳವರೆಗೆ ಆಳವಾಗಿ ಇಳಿಯಲು ಅನುವು ಮಾಡಿಕೊಡುವುದರ ಜೊತೆಗೆ ತಲೆಹೊಟ್ಟು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕೂದಲ ಬೆಳವಣಿಗೆ ಅಲೋವೆರಾ ಬಹಳ ಪ್ರಸಿದ್ಧವಾಗಿದ್ದು , ಕೂದಲು ತೆಳುವಾಗುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಬೇಸಿಗೆಯಲ್ಲಿ ಒಟ್ಟಾರೆ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಅಲೋವೆರಾ , ವಿಟಮಿನ್ ಹಾಗೂ ಖನಿಜಗಳಿಂದ ಸಂಬದ್ಭರಿತವಾಗಿದ್ದು, ನಿಮ್ಮ ನೆತ್ತಿ ಹಾಗೂ ಕೂದಲಿಗೆ ಪೌಷ್ಠಿಕತೆ ಒದಗಿಸುತ್ತದೆ , ಮತ್ತು ಕೂದಲನ್ನು ಬಲಪಡಿಸಿ ತುಂಡಾಗುವುದನ್ನು ತಡೆಗಟ್ಟುತ್ತದೆ. ತುರಿಸುವ ನೆತ್ತಿಗೆ ಆರಾಮ ನೀಡಿ ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ.
ಪ್ರೋಟಿಪ್: ನಿಮ್ಮ ನೆತ್ತಿಯ ಮೇಲೆ ತುದಿಯವರೆಗೆ ಮೃದುವಾಗಿ ತೈಲವನ್ನು ಮಸಾಜ್ ಮಾಡಿ. ಕೂದಲನ್ನು ತೊಳೆಯುವ ಮುನ್ನ 30 ನಿಮಿಷ ಹಾಗೆಯೇ ಬಿಡಿ. ಉತ್ತಮ ಫಲಿತಾಂಶಗಳಿಗಾಗಿ ಈ ಹೇರ್ ಮಾಸ್ಕನ್ನು ವಾರಕ್ಕೆ 2-3 ಬಾರಿ ಬಳಸಿ. ಆದ್ದರಿಂದ, ಈ ಬೇಸಿಗೆಯ ಋತುವಿನಲ್ಲಿ ಕೂದಲಿನ ಆರೈಕೆಯನ್ನು ನಿತ್ಯ ನಿಯಮಿತವಾಗಿ ಮಾಡಿ ಮತ್ತು ಅಲೋವೆರಾ ಮತ್ತು ತೆಂಗಿನಕಾಯಿ ಆಧರಿತ ಕೂದಲಿನ ಎಣ್ಣೆಯ ಸಂಯೋಜಿತ ಪ್ರಯೋಜನವನ್ನು ಹೊಂದಿ. ಮುರುಟುವಿಕೆಯನ್ನು ನಿಯಂತ್ರಿಸಿ ಮತ್ತು ಮೃದುವಾದ ಅರೋಗ್ಯವಂತವಾದ ಕೂದಲನ್ನು ಹೊಂದಿ.