ಎಂ ಎನ್ ಕೋಟೆ: ಕೆರೆಗಳಲ್ಲಿ ಮಣ್ಣು ಹೊಡೆಯವು ದನ್ನು ಸರಕಾರ ಆದೇಶ ತಂದಿರುವುದು ಸರಿಯಲ್ಲ ಕೂಡಲೇ ಸರ್ಕಾರ ಆದೇಶವನ್ನು ವಾಪಸು ಪಡೆಯಬೇಕು ಇಲ್ಲದಿದ್ದಾರೆ ರೈತರಿಗೆ ವಿಷ ಕೊಡಿ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅರೇಹಳ್ಳಿ ಮಂಜುನಾಥ್ ಸರ್ಕಾರಕ್ಕೆಒತ್ತಾಯಿಸಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಸಾಕಷ್ವು ರೈತರು ಕೆರೆಯಲ್ಲಿ ಹೊಳು ತೆಗೆದು ರೈತರ ಜಮೀನಿಗೆ ಹೊಡೆದುಕೊಳುತ್ತಿದ್ದರು.ಕೆರೆಯಲ್ಲಿ ನೀರು ನಿಲ್ಲಲು ಸಹಕಾರಿಯಾಗುತ್ತಿತ್ತು.ಆದರೆ ಸರಕಾರ ಕೆರೆಯಲ್ಲಿ ಮಣ್ಣು ತೆಗೆಯುವುದನ್ನು ನಿಲ್ಲಿಸಿರುವುದು ಸರಿಯಲ್ಲ ಸರಕಾರವೇ ಕೆರೆಯಲ್ಲಿ ಹೊಳು ಎತ್ತಿ ಅಂಥ ಸಾಕಷ್ವು ಭಾರಿ ಕೆರೆ ಅಭಿವೃದ್ದಿಗಳನ್ನು ಲಕ್ಷಾಂತರ ಹಣವನ್ನು ಖರ್ಚುಮಾಡಿದೆ.
ಆದರೆ ಈಗ ಜಿಲ್ಲಾ ಪಂಚಾಯಿತಿ ವತಿಯಿಂದ ಆದೇಶ ಬಂದಿರುವುದು ಖಂಡನೀಯ ರೈತರಿಗೆ ಮಣ್ಣು ತೆಗೆಯಲು ಸರ್ಕಾರ ಅವಕಾಶ ಕಲ್ಪಿಸಬೇಕು ಇಲ್ಲದಿದ್ದಾರೆ ರೈತ ಸಂಘದ ಜಿಲ್ಲಾಧ್ಯಕ್ಷರ ಜತೆ ಚರ್ಚಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದಾರೆ.ರೈತ ಸಂಘದ ಅಧ್ಯಕ್ಷ ಕೃಷ್ಣಜೆಟ್ಟಿ ಮಾತನಾಡಿ ಸರ್ಕಾರ ಆದೇಶ ತಂದಿರುವುದು ಸರಿಯಲ್ಲ ಗ್ರಾಮೀಣ ಭಾಗದ ರೈತರು ಕೆರೆಯಲ್ಲಿ ಮಣ್ಣು ತೆಗೆದು ಜಮೀನಿಗೆ ಹೊಡೆದುಕೊಂಡು ರಾಗಿ ಭತ್ತ ಮುಂತಾದ ಬೆಳೆಗಳನ್ನು ಬೆಳೆಯಲು ಮಣ್ಣು ಫಲವತ್ತತೆ ಸಿಗುತ್ತೀತು ಆದರೆ ಜಿಲ್ಲಾ ಪಂಚಾಯಿತಿಯವರ ಧೋರಣೆಯಿಂದ ಮಣ್ಣು ತೆಗೆಯಲು ರೈತರಿಗೆ ಬೀಡುತ್ತಿಲ್ಲ ಮುಂದಿನ ದಿನಗಳಲ್ಲಿ ರೈತರಿಗೆ ಮಣ್ಣು ಹೊಡೆಯಲು ಅವಕಾಶ ಕಲ್ಪಿಸಬೇಕು.ಇಲ್ಲದಿದ್ದಾರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಷರಿಕೆ ನೀಡಿದರು.
ಇದೇ ಸಂಧರ್ಭದಲ್ಲಿ ರೈತ ಸಂಘದ ಜಿಲ್ಲಾಕಾರ್ಯದರ್ಶಿ ರೈತ ಮುಖಂಡರಾದ ನಂಜುಂಡಪ್ಪ,ಚಿಕ್ಕಣ್ಣ, ಮುದ್ದಲಿಂಗಪ್ಪ, ಲಿಂಗರಾಜು, ಬಸವರಾಜು, ಅಜ್ಜಪ್ಪ, ನರಸಿಂಹಮೂರ್ತಿ, ರಾಮಯ್ಯ ಹಾಗೂ ರೈತರು ಭಾಗವಹಿಸಿದ್ದರು.