ಟಿ.ನರಸೀಪುರ: ತಾಲ್ಲೂಕಿನ ಸೋಸಲೆ ಗ್ರಾಮದಲ್ಲಿ ನಡೆದ ಸೋಸಲೆ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಫ್ರೆಂಡ್ ಕ್ರಿಕೆಟರ್ಸ್ ತಂಡವನ್ನು ಮಣಿಸಿ ಅರ್ಜುನ ವಾರಿಯರ್ಸ್ ತಂಡ ಈ ಲೀಗ್ನ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಫ್ರೆಂಡ್ ಕ್ರಿಕೆಟರ್ಸ್ ತಂಡ ಚೇತನ್ ಅವರ ಬ್ಯಾಟಿಂಗ್ ಸಹಾಯದಿಂದ ೮ ಓವರ್ ಮುಕ್ತಾಯಕ್ಕೆ ೪೨ ರನ್ ಗಳಿಸಿತು, ಬಳಿಕ ೪೩ ರನ್ ಗಳ ಗುರಿ ಬೆನ್ನಟ್ಟಿದ ಅರ್ಜುನ ವಾರಿಯರ್ಸ್ ತಂಡ ನಂಜುAಡ (ಕ್ವಾಡು) ಅವರ ಉಪಯುಕ್ತ ರನ್ ಕಾಣಿಕೆಯಿಂದ ಗೆಲುವಿನ ದಡ ಸೇರಿತು. ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೋಸಲೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹೇಶ್ ಮಾತನಾಡಿ ಈ ಒಂದು ಪಂದ್ಯಾವಳಿ ನೋಡುತ್ತಿದ್ದಾರೆ ನಮ್ಮ ಬಾಲ್ಯ ನೆನಪಾಗುತ್ತದೆ, ನಾವು ಕ್ರಿಕೆಟ್ ಆಡಬೇಕು ಎಂಬ ಹಂಬಲ ಮೂಡುತ್ತದೆ ಹಾಗೆ ಎಲ್ಲಾ ಕ್ರೀಡಾಪಟುಗಳು ಕ್ರೀಡೆಯ ಜೊತೆಗೆ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ ಜೀವನದಲ್ಲಿ ಯಶಸ್ವಿಯಾಗಬೇಕು ಎಂದರು.
ನAತರ ವಕೀಲರ ಸಂಘದ ಖಜಾಂಚಿ ಸೋಸಲೆ ಮಹಾದೇವಸ್ವಾಮಿ ಅವರು ಮಾತನಾಡಿ ಈ ಕಾಲಘಟ್ಟದ ಮಕ್ಕಳು ಹೆಚ್ಚು ಮೊಬೈಲ್, ಟಿವಿ ಕಡೆ ಹೆಚ್ಚು ಗಮನ ಹರಿಸಿ ಕ್ರೀಡೆಗಳ ಕಡೆ ಗಮನ ಹರಿಸದೆ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಹಾಗಾಗಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಕ್ರೀಡೆಯ ಕಡೆ ಗಮನ ಹರಿಸಬೇಕು ಹಾಗೂ ಈ ಒಂದು ಸೋಸಲೆ ಪ್ರೀಮಿಯರ್ ಲೀಗ್ ಮುಂದುವರಿಸಿಕೊAಡು ಹೋಗಬೇಕು ಎಂದು ಅಯೋಜರಿಗೆ ಸಲಹೆ ನೀಡಿದರು.ಪಂದ್ಯವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಅರ್ಜುನ ವಾರಿಯರ್ಸ್ ತಂಡದ ಗಂಗಾಧರ್ ಸ್ವಾಮಿ(ಗುಂಡ) ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಈ ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸಮೆನ್ ಹಾಗೂ ಬೆಸ್ಟ್ ಬೌಲರ್ ಆಗಿ ದೊಡ್ಡೇಬಾಗಿಲು ತಂಡದ ಆರ್ಷದ್ ಹಾಗೂ ತೇಜುಮೂರ್ತಿ ಪಡೆದರು. ಈ ಸಂದರ್ಭದಲ್ಲಿ ಈ ಪಂದ್ಯಾವಳಿಯ ಪ್ರೋತ್ಸಾಹಕರಾದ ಯುವ ಕಾಂಗ್ರೆಸ್ ಮುಖಂಡರಾದ ರಾಜು (ಬೆಳ್ಳಿ), ದೀಪ ಬ್ಯಾಂಗಲ್ಸ್ ಸ್ಟೋರ್ ಮಾಲೀಕರಾದ ಮಧು, ಸೋಸಲೆ ಗ್ರಾಮ ಯುವ ಮುಖಂಡರಾದ ಗುರುರಾಜ್, ಶ್ರೀಕಾಂತ್, ಎಸ್.ಪಿ. ಮಹಾದೇವಸ್ವಾಮಿ ಉಪಸ್ಥಿತರಿದ್ದರು.


		
		
		
		