ಬೆAಗಳೂರು : ೨೦ ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಅಂದಾಜು ೫೦೦ ಮೊಬೈಲ್ ಗಳು, ಚಿನ್ನಾಭರಣಗಳುನ್ನು ಬೇಗೂರ್, ಅಮೃತಳ್ಳಿ, ಸಿಸಿಬಿ, ವರ್ತೂರ್, ಉಪ್ಪಾರಪೇಟೆ, ಮಡಿವಾಳ, ಜ್ಞಾನಭಾರತಿ, ಕೆಂಗೇರಿ,ಮೈಕೋಲೇಔಟ್, ವಿಜಯನಗರ, ಜೆಪಿ ನಗರ, ಕುಮಾರಸ್ವಾಮಿ ಲೇಔಟ್, ತಲಘಟ್ಟಪುರ, ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಮಾಂಡ್ ಸೆಂಟರ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿ ವಶಪಡಿಸಿಕೊಂಡಿರುತ್ತಾರೆ.
ದರೋಡೆ, ಸುಲಿಗೆ,ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂದಾಜು ನೂರು ಜನ ಆರೋಪಿಗಳನ್ನು ಬಂಧಿಸಿರುತ್ತಾರೆ ಇಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೨೦ ಕೋಟಿ ರೂ. ಮೌಲ್ಯದ ಮೊಬೈಲ್, ಚಿನ್ನಾಭರಣ ವಶ, ಆರೋಪಿಗಳ ಬಂಧನ



