ಬೆಂಗಳೂರು: ಸಾರ್ವಜನಿಕರಿಂದ ಸುಲಿಗೆ ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿರುತ್ತಾರೆ.
ಸಿಗರೇಟ್ ಸಣ್ಣಪುಟ್ಟ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದ ವ್ಯಕ್ತಿಯಿಂದ ಡಿ.10 ರಂದು 2 ಲಕ್ಷ ರೂ ನಗದಲ್ಲೂ ಚಾಕು ತೋರಿಸಿ ಬೆದರಿಸಿ ದರೋಡೆ ಮಾಡಿದ್ದ ಅಕ್ಮಲ್, ಅಲಿ, ವಾಸಿಂ, ಅಝರ್ ಮತ್ತು ಅಲ್ಲಾಭಕಾಶ್ ಆರೋಪಿಗಳನ್ನು ಬಂಧಿಸಿರುತ್ತಾರೆ.
ಈ ಹಿಂದೆ ಅಕ್ಮಲ್ ನೆಲಮಂಗಲದಲ್ಲಿ ದರೋಡೆ ಪ್ರಕರಣದಲ್ಲಿ ಹಾಗೂ ಕೆಜಿ ಹಳ್ಳಿ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ.