ಬೆಂಗಳೂರು: ಹಗಲು ಹೊತ್ತಲ್ಲೇ ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ಸುಲಿಗೆ ಮಾಡಿದ್ದ ಖತರ್ನಾಕ್ ಗ್ಯಾಂಗನ್ನು ಕೊಡಿಗೆಹಳ್ಳಿಪೊಲೀಸರು ಬಂಧಿಸಿದ್ದಾರೆ.
ಗುರು, ರುದ್ರೇಶ್, ಸಂದೀಪ್, ಪ್ರಭಾವತಿ, ರೇಣುಕಾ ಬಂಧಿತರು. ಆರೋಪಿಗಳಾದ ಗುರು ಮತ್ತು ರೇಣುಕಾ ಇಬ್ಬರು ಪತಿ-ಪತ್ನಿ. ರೇಣುಕಾ ಹಣದ ಆಸೆಗೆ ಬಿದ್ದು ತನ್ನ ಸ್ನೇಹಿತೆ ಬಳಿಯೇ ಹಣ ದೋಚಲು ಸಂಚು ರೂಪಿಸಿ ಕೆಮಿಕಲ್ ಇದ್ದ ಕರ್ಚಿಫ್ ಮುಖಕ್ಕೆ…
ಇಟ್ಟು ಬಳಿಕ ಕೈ-ಕಾಲು ಕಟ್ಟಿ ಹಾಕಿ ದರೋಡೆ ಮಾಡಿ ಪರಾರಿಯಾಗಿದ್ದರು.
ಮಾಡಿದ್ದ ಸಾಲ ತೀರಿಸಲು ಅಡ್ಡದಾರಿ ಹಿಡಿದಿದ್ದ ಪ್ರಭಾವತಿ ತನ್ನ ಗ್ಯಾಂಗ್ನೊಂದಿಗೆ ಜ. 14ರ ಬೆಳಗ್ಗೆ 9.20 ಗಂಟೆ ಸುಮಾರಿಗೆ ಕೊಡಿಗೆಹಳ್ಳಿ ಸಮೀಪದ ತಿಂಡ್ಲು ಸರ್ಕಲ್ನಲ್ಲಿ ಇರುವ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್ಗೆ ನುಗ್ಗಿ ಅಟ್ಟಹಾಸ ಮೆರೆದಿದ್ದಳು. ಅನುಶ್ರೀ ಎಂಬ ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ಮಾಂಗಲ್ಯ ಸರ ಸೇರಿದಂತೆ ಚಿನ್ನಾಭರಣ ಕಸಿದು ಪರಾರಿಯಾಗಿದ್ದರು. ಘಟನೆ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಆಯುರ್ವೇದಿಕ್ಗೆ ಸೆಂಟರ್ಗೆ ಮಸಾಜ್ ಥೆರಪಿಗೆಂದು ಬಂದು ದರೋಡೆ ಮಾಡಿದ್ದರು. ಅಲ್ಲದೆ ಆರೋಪಿಗಳು ಆಯುರ್ವೇದಿಕ್ ಮಸಾಜ್ ಮಾಡಿಸೋ ಮಾಹಿತಿ ಕೇಳಲು ಹಿಂದಿನ ದಿನವೇ ಬಂದು ದರೋಡೆಗೆ ಪ್ಲಾನ್ ಮಾಡಿ ಹೋಗಿದ್ದರು ಎನ್ನಲಾಗಿದೆ.