ಬೆಂಗಳೂರು: ಪ್ರತಿಷ್ಠಿತ ಇನ್ಷೂರೆನ್ಸ್ ಕಂಪನಿಗಳಾದ ಎಚ್ಡಿಎಫ್ಸಿ ರಿಲಯನ್ಸ್, ಕೊಟಾಕ್ ಮಹೀಂದ್ರಾ ಹಾಗೂ ಇನ್ನೂ ಇತರೆ ಇನ್ಷೂರೆನ್ಸ್ ಕಂಪನಿಗಳಿಗೆ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುತ್ತಾರೆ.
ಇನ್ಸೂರೆನ್ಸ್ ಕಂಪನಿಗಳ ಹೆಸರುಗಳನ್ನು ಹೇಳಿಕೊಂಡು ಇನ್ಷೂರೆನ್ಸ್ ಪಾಲಿಸಿದಾರರಿಗೆ ಹಾಗೂ ಸ್ವಲ್ಪ ಹಣವನ್ನು ಮುಂಗಡವಾಗಿ ನೀಡಿದರೆ ನಿಮ್ಮ ಹಣವನ್ನು ಆದಷ್ಟು ಬೇಗ ಕೊಡಿಸುತ್ತೇನೆ ಎಂದು ಹೇಳಿ ವಂಚಿಸುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತನು ಇಲ್ಲಿಯ ತನಕ ಒಂದು ಕೋಟಿ 80 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿರುತ್ತಾನೆ. ಹಾಗೂ ಇವನ ಖಾತೆಯಲ್ಲಿ 40 ಲಕ್ಷ ರೂಗಳನ್ನು ಸಹ ಹೊಂದಿಸಿ ಇಟ್ಟಿರುತ್ತಾನೆ. ಈಗ ಈತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಷ್ಟಗಳಿಗೆ ತೆಗೆದುಕೊಂಡಿರುತ್ತಾರೆ.