ರಾಯಚೂರು: ಜಿಲ್ಲೆಯ ಮಾನ್ವಿ ತಾಲ್ಲೂಕಿನ ಜೀನೂರು ಗ್ರಾಮದಲ್ಲಿ ಇದೇ ಮಾರ್ಚ್ 31ರಂದು ನಡೆದ ರಾಮಣ್ಣ ಎನ್ನುವ ವ್ಯಕ್ತಿಯ ಕೊಲೆ ನಡೆದಿತ್ತು. ನಿನ್ನೆಯಯಷ್ಟೇ ಕೆಲ ಹಂತಕರು ಸೇರಿ ದೊಣ್ಣೆ, ಕೊಡಲಿಗಳಿಂದ ಹೊಲದಲ್ಲಿ ನೆಲಕ್ಕೆ ಕೆಡವಿ ಸಿನಿಮಾ ಸ್ಟೈಲಿನಲ್ಲಿ ಹತ್ಯೆಗೈದಿರುವ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ನೋಡಿ ಜನ ಬೆಚ್ಚಿ ಬಿದ್ದಿದ್ದರು.
ಮೃತ ರಾಮಣ್ಣನ ಅಣ್ಣಂದಿರಾದ ಮೂಕಯ್ಯ ಅಲಿಯಾಸ್ ಮುದುಕಯ್ಯ, ನಿಂಗಪ್ಪ ಸೇರಿ ಒಟ್ಟು ಎಂಟು ಜನರ ವಿರುದ್ಧ ಮಾನ್ವಿಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪೈಕಿ ಪೊಲೀಸರು ಅಣ್ಣಂದಿರಾದ ಮೂಕಯ್ಯ, ನಿಂಗಪ್ಪ, ಆತನ ಪತ್ನಿ ಲಕ್ಷ್ಮೀ, ಮುದುಕಯ್ಯನ ಪತ್ನಿ ನೀಲಮ್ಮ, ಮುದುಕಯ್ಯನ ಮಗ ಸೋಮು ಸೇರಿ ಐದು ಜನ ಆರೋಪಿಗಳನ್ನ ಬಂಧಿಸಿದ್ದಾರೆ.