ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ಅನುಮತಿ ಇಲ್ಲದೆನಿಷೇಧಿತ ಸ್ಥಳಗಳಲ್ಲಿ ಮೊಬೈಲ್ ಇಂದ ವಿಡಿಯೋ ತೆಗೆದ ಆಸಾಮಿಯನ್ನು cisf ಅಧಿಕಾರಿ ದೂರು ನೀಡಿದ ಹಿನ್ನೆಲೆಯಲ್ಲಿ ವಿಕಾಸ್ ಗೌಡ ಎಂಬತನನ್ನು ಬಂಧಿಸಿರುತ್ತಾರೆ.
ವಿಕಾಸ್ ಗೌಡ ಎಂಬ ಆರೋಪಿಯು ಏಪ್ರಿಲ್ ಏಳರಂದು ಚೆನ್ನೈಗೆ ಹೋಗಲು ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಿ ಚೆನ್ನೈಗೆ ಹೋಗದೆ ಇದ್ದ ಕಾರಣ cisf ಸಿಬ್ಬಂದಿಗೇ ಅನುಮಾನ ಬಂದು ವಿಚಾರಿಸಲಾದಾಗ ತಾನು ಇಡೀ ದಿನ ಏರ್ಪೋರ್ಟ್ ನಲ್ಲಿ ಇರುವುದಾಗಿ ಹೇಳಿ ತನ್ನ ಮೊಬೈಲ್ ನಲ್ಲಿ ಏರ್ಪೋರ್ಟ್ ಒಳಗೆ ನಿಷೇಧಿತ ಸ್ಥಳಗಳಲ್ಲಿ ವಿಡಿಯೋ ಶೂಟ್ ಮಾಡಿ ಯೂಟ್ಯೂಬ್ ನಲ್ಲಿ ಹಾಕಿದ್ದನು.
ಛಿisಜಿ ಸಿಬ್ಬಂದಿ ಅನುಮಾನ ಬಂದು ಮೊಬೈಲ್ ಪರಿಶೀಲಿಸಿದಾಗ ಮೊಬೈಲ್ನಲ್ಲಿ ಶೂಟ್ ಮಾಡಿದ್ದ ವಿಡಿಯೋವನ್ನು ಮತ್ತು ಈತನನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.