ಗೌರಿಬಿದನೂರು: ಬೆಂಗಳೂರು ಹಿಂದೂಪುರ ಹೆದ್ದಾರಿಯಲ್ಲಿ ದೊಡ್ಡಕುರುಗೋಡು ಹಾಗೂ ಚೌಳೂರು ಗೇಟ್ ಮಧ್ಯ ರಾತ್ರಿವೇಳೆ ವಾಹನಗಳು ಹಾಗೂ ನಡೆದು ಹೋಗುವರರನ್ನು ಭಯ ಭೀತರನ್ನಾಗಿ ಮಾಡಿ ಅವರ ಬಳಿ ಇದ್ದ ಬೆಲೆಬಾಳುವ ವಸ್ತುಗಳಾದ ಮೊಬೈಲ್, ಚಿನ್ನದ ಸರ,
ನಗದನ್ನು ದೋಚಲು ದೊಡ್ಡಕುರುಗೋಡು ಕೆರೆ ಕಟ್ಟೆಯ ಮೇಲಿನ ದೇವಾಲಯದ ಹಿಂಬದಿ ಹೊಂಚು ಹಾಕುತ್ತಿದ್ದ 5 ಮಂದಿ ಗುಂಪಿನಮೇಲೆ ಗ್ರಾಮಾಂತರ ಪೋಲೀಸರು ದಾಳಿ ಮಡಿ ಸೂರಿ ಬಿನ್.ಚಿಕ್ಕವೀರಪ್ಪ (28)ರಮಾಪುರ, ಲಂಕೇಶ್ ಬಿನ್ ನಂದೀಶಪ್ಪ ಕಲ್ಲಿನಾಯಕನಹಳಿ (26)ರವರನ್ನು ಬಂಧಿಸಿದ್ದು,ಅರುಣ್ ಕುಮಾರ್ ಬೊಮ್ಮಿಶೆಟ್ಟಿಹಳ್ಳಿ ಹಾಗೂ ಇವನೊಂದಿಗೆ ಇಬ್ಬರು ಪರಾರಿ ಆಗಿದ್ದು ಪರಾರಿ ಆದವರಿಗಾಗಿ ಗ್ರಾಮಾಂತರ ಪೋಲೀಸರು ಹುಡುಕುತ್ತಿದ್ದಾರೆ.
ಇವರಿಂದ ಲಾಂಗ್, ಮೊಚ್ಚು,ಹಗ್ಗ,ದೊಣ್ಣೆಗಳನ್ನು ಸ್ವಾಧೀನ ಪಡಿಸಿಕೊಳ್ಳ ಲಾಗಿದೆ.ಜಿಲ್ಲಾ ಮಟ್ಟದ ಪೋಲಿಸ್ ಅಧಿಕಾರಿಗಳಾದ ನಾಗೇಶ್, ಶ್ರೀರಾಜ್ ಇಮಾಂ ಖಾಸೀಂ, ಶಿವಕುಮಾರ್ ಸಿಐ ಸತ್ಯನಾರಾಯಣ, ನೇತೃತ್ವದಲ್ಲಿ ಪಿಎಸೈ ಗಳಾದ ರಮೇಶ್ ಗುಗ್ಗರಿ,ಬಾಲಾಕುಮಾರ್, ಅಶ್ವತ್ಥಪ್ಪ, ನವೀನ್ ಕುಮಾರ್ ಮುಂತಾದವರು ದಾಳಿ ಮಾಡಿ ಢಕಾಯಿತರನ್ನು ಬಂಧಿಸಿದ್ದಾರೆ.