ಬೆಂಗಳೂರು : ಬೆಂಗಳೂರಲ್ಲಿ ಜಯನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಖೋಟಾ ನೋಟಿನ ಗ್ಯಾಂಗ್ ಒಂದನ್ನು ಅರೆಸ್ಟ್ ಮಾಡಿದ್ದಾರೆ. ಒರಿಜಿನಲ್ ನೋಟಿಗೆ ಖೋಟಾ ನೋಟಿನ ಆಫರ್ ನೀಡುತ್ತಿದ್ದ ಖದೀಮರನ್ನು ಅರೆಸ್ಟ್ ಮಾಡಿದ್ದಾರೆ. ಹೌದು ೧೦ ಲಕ್ಷ ಅಸಲಿ ನೋಟಿಗೆ ೩೦ ಲಕ್ಷ ಖೋಟಾ ನೋಟಿನ ಆಫರ್ ನೀಡಿದ್ದರು. ಖೋಟಾ ನೋಟು ಆಫರ್ ನೀಡಿ ಗ್ಯಾಂಗ್ ವಂಚನೆ ಎಸಗುತ್ತಿತ್ತು. ತಮಿಳುನಾಡಿನ ತಿರುನೆಲ್ವೇಲಿಯ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಒಟ್ಟು ೩೦ ಲಕ್ಷ ಕೊಟ್ಟ ಖೋಟಾ ನೋಟನ್ನು ವಶಕ್ಕೆ ಪಡೆದ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ಒಂದು ಗ್ಯಾಂಗ್ ಸೂಟ್ಕೇಸ್ ಮೇಲ್ಭಾಗದಲ್ಲಿ ಅಸಲಿ ನೋಟುಗಳನ್ನು ಇಟ್ಟು ಮಧ್ಯದ ಭಾಗದಲ್ಲಿ ಮಾತ್ರ ಬಳಿ ಹಾಳೆಗಳನ್ನು ಇಟ್ಟು ಜನರಿಗೆ ವಂಚಿಸುತ್ತಿದ್ದರು. ಇವರು ಜಯನಗರದಲ್ಲಿ ಸೂಟ್ಕೇಸ್ ಸಮೇತ ನಿಂತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಳಿಕ ಸೂಟ್ಕೇಸ್ನಲ್ಲಿದ್ದ ಹಣವನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ.