ಬೆಂಗಳೂರು: ಅಪ್ರಾಪ್ತ ಬಾಲಕದಿಂದ ಬಲತ್ಕಾರವಾಗಿ ಚಿನ್ನಾಭರಣಗಳನು ಪಡೆದುಕೊಂಡಿದ್ದ ನಾಲ್ಕು ವ್ಯಕ್ತಿಗಳನ್ನು ಬಂಧಿ ಸಲಾಗಿದೆ.ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಐಡಿಯಲ್ ಹೋಂ ನಿವಾಸಿಯೊಬ್ಬರು ನೀಡಿದ ದೂರಿನ ಅನ್ವಯ ಕಾರ್ತಿಕ್ ಕುಮಾರ್(32), ಸುನಿಲ್(30), ವೇಮನ್(19) ಮತ್ತು ವಿವೇಕ್(19) ಇವರುಗಳನ್ನು ಬಂಧಿಸಿರುತ್ತಾರೆ.
ದೂರುದಾರರ ಮಗ ಹಾಗೂ ಆತನ ಸ್ನೇಹಿತರಿಬ್ಬರೂ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೆ ಮತ್ತು ಎಲ್ಲರೂ ಅಪರಾಪ್ತ ವಯಸ್ಸಿನರಾಗಿರುತ್ತಾರೆ.
ಪಿರ್ಯಾದುದಾರರ ಮಗ ಮೊಬೈಲ್ ನಲ್ಲಿ ಆನ್ಲೈನ್ ಮುಖಾಂತರ ಪಬ್ಜಿ ಹಾಗು ಡ್ರೀಮ್ ಗೇಮ್ ಗಳನ್ನು ಆಟವಾಡುತ್ತಿದ್ದ ಬಗ್ಗೆ ಆತನ ಸ್ನೇಹಿತರೆ ತಂದೆ ತಾಯಿಗಳಿಗೆ ತಿಳಿಸುವುದಾಗಿ ಬೆದರಿಸಿರುತ್ತಾರೆ.
ನಿಮ್ಮ ತಂದೆ ತಾಯಿಗೆ ಹೇಳಬಾರದೆಂದರೆ ನೀನು ಹಣ ತಂದು ಕೊಡಬೇಕೆಂದು ಧಮ್ಕಿ ಹಾಕಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ದೂರುದಾರರ ಮಗ ಹಣವಿಲ್ಲ ಎಂದಾಗ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ತಂದು ಕೊಡುವಂತೆ ತಿಳಿಸಿದರು.ಅವರ ಮಾತುಗಳನ್ನು ಕೇಳಿ ಹೆದರಿ ಮನೆಯಲ್ಲಿದ್ದ ಸುಮಾರು 700 ಗ್ರಾಂ ಚಿನ್ನಾಭರಣಗಳನ್ನು ತಂದು ಸ್ನೇಹಿತರಿಬ್ಬರಿಗೆ ನೀಡಿರುತ್ತಾನೆ.
ಇವುಗಳ ಮೌಲ್ಯ ಸುಮಾರು 42 ಲಕ್ಷ ವಾಗಿರುತ್ತದೆ.ಆರೋಪಿಗಳನ್ನು ಬಂಧಿಸಿ 23 ಲಕ್ಷ ರೂಪಾಯಿ ನಗದು ಸೇರಿದಂತೆ 41.50 ಲಕ್ಷ ರು ಮೌಲ್ಯದ ಆಭರಣಗಳು ಸಹ ವಶಪಡಿಸಿಕೊಂಡಿರುತ್ತಾರೆ ಎಂದು ಆಯುಕ್ತರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.