ಬೆಂಗಳೂರು: ಡಿ ಜೆ ಹಳ್ಳಿಯ ದುಬೈ ಲೇಔಟ್ ನ ಸೈಯದ್ ಮುಬಾರಕ್ ಮತ್ತು ಸೈಯದ್ ರವರುಗಳನು ಹೆಣ್ಣೂರು ಪೊಲೀಸರು ಬಂಧಿಸಿರುತ್ತಾರೆ.
ಈ ಆರೋಪಿಗಳು ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಾಜಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಗ್ರಾಹಕರುಗಳಿಗೆ ಭಯದ ವಾತಾವರಣ ಉಂಟು ಮಾಡುವ ರೀತಿಯಲ್ಲಿ ಎರಡು ಲಾಂಗ್ ಗಳನ್ನು ಇಟ್ಟುಕೊಂಡು ಕುಳಿತಿದ್ದರು.
ಇದನ್ನು ನೋಡಿದ ಬಾರ್ ಕ್ಯಾಶಿಯರ್ ಹೆಣ್ಣೂರು ಪೊಲೀಸರಿಗೆ ತಿಳಿಸಿದ ಮೇರೆಗೆ ಹೊಯ್ಸಳದಲ್ಲಿದ್ದ ಏಎಸ್ಐ ಅಲ್ತಾಫ್ ಮತ್ತು ಮುಖ್ಯಪೇದೆ ಶ್ರೀಕುಮಾರ್ ರವರುಗಳು ತಕ್ಷಣ ಬಂದು ಈ ಇಬ್ಬರನ್ನು ಹಿಡಿದು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಲಾಗಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ಸಲುವಾಗಿ ಮತ್ತು ಹಫ್ತ ವಸೂಲು ಮಾಡುವ ಉದ್ದೇಶದಿಂದ ಈ ಲಾಂಗ್ ಗಳನ್ನು ಇಟ್ಟುಕೊಂಡಿರುವುದಾಗಿ ತಿಳಿಸಿದ ಮೇರೆಗೆ ಬಂಧಿಸಿರುತ್ತಾರೆ.