ಬೆಂಗಳೂರು : ಸಾರ್ವಜನಿಕರು ದ್ವಿಚಕ್ರ ವಾಹನದಲ್ಲಿ ಹೋಗುವ ಸಮಯದಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಚಿಕ್ಕಜಾಲ ಮತ್ತು ಬಾಗಲೂರು ಪೊಲೀಸರು ಬಂಧಿಸಿರುತ್ತಾರೆ.
ಆರೋಪಿಗಳಾದ ಶಾಮ್(22) ಪ್ರದೀಪ್(27) ರವರುಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದರೆ, ಕಪಿಲ್ ಇರಸ್ಕರ್(30) ವರ್ಷ ಈತನನ್ನು ಬಾಗಲೂರು ಪೊಲೀಸರು ಬಂಧಿಸಿರುತ್ತಾರೆ.
ಆರೋಪಿಗಳಿಂದ ದರೋಡೆ ಮಾಡಿದ್ದ ಐದೂವರೆ ಲಕ್ಷ ರೂಪಾಯಿ ಬೆಲೆಬಾಳುವ ಮೊಬೈಲ್ ಫೋನ್ಗಳು ನಗದು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ದರೋಡೆ ಮಾಡಲು ಬಳಸುತ್ತಿದ್ದ ವಾಹನಗಳನ್ನು ಹಾಗೂ ಮಾರಕಾಸ್ತ್ರಗಳನ್ನು ಸಹ ಜಪ್ತಿ ಮಾಡಿರುತ್ತಾರೆ.



