ಚಂದಾಪುರ: ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಸಮೀಪವಿರುವ ಎಸ್.ಎಫ್.ಎಸ್. ಕಾಲೇಜಿನಲ್ಲಿ ಜೂ.13 ರಂದು ನಡೆಯಲಿರುವ ಗ್ರ್ಯಾಜುಯೇಷನ್ ಡೇ ಕಾರ್ಯಕ್ರಮಕಕ್ಕೆ ಕರ್ನಾಟಕದ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ರವರು ಆಗಮಿಸಲಿದ್ದಾರೆ ಎಂಬುದಾಗಿ ಎಸ್.ಎಪ್.ಎಸ್. ಕಾಲೇಜಿನ ಪ್ರಾಂಶುಪಾಲರಾದ ಪಾದರ್ ಡಾ|| ಬಿನುರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ಹೆಬ್ಬಗೋಡಿಯ ಎಸ್.ಎಪ್.ಎಸ್. ಕಾಲೇಜಿ ನಲ್ಲಿ ಜೂ.13 ರಂದು ನಡೆಯಲಿರುವ ಗ್ರ್ಯಾಜುಯೇಷನ್ ಡೇ ಕಾರ್ಯಕ್ರಮಕಕ್ಕೆ ರಾಜ್ಯಪಾಲರು ಆಗಮನದ ಹಿನ್ನಲೆ ಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಯುಜಿಸಿ ಮಾನ್ಯತೆ ಕಾಲೇಜು ಘೋಷಣೆ:- ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ಪ್ರಸ್ತುತ ಸಾಲಿನಲ್ಲಿ ಎಸ್.ಎಪ್.ಎಸ್.ಕಾಲೇಜಿಗೆ ಯುಜಿಸಿ ಮತ್ತು ಕರ್ನಾಟಕ ಸರ್ಕಾರದಿಂದ ನೀಡಿರುವ ಸ್ವಾಯುತ್ತ ಸ್ಥಾನಮಾನವನ್ನು (ಅಟೋ ನೋಮಸ್) ಮಾನ್ಯ ರಾಜ್ಯಪಾಲರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು
ಹೆಮ್ಮೆ ಹಾಗೂ ಸಂತೋಷ:- ಎನ್.ಸಿ.ಸಿ.ಕಮಾಂಡರ್ ಚೀಫ್ ಸಂಪತ್ ಕುಮಾರ್ ಮಾತನಾಡುತ್ತ ನಮ್ಮ ಕಾಲೇಜಿಗೆ ಕರ್ನಾಟಕ ಸರ್ಕಾರದ ಯುಜಿಸಿ ಮಾನ್ಯತೆಯ ಗೌರವ ಪಡೆದುಕೊಂಡು ನಮ್ಮ ಎಸ್.ಎಪ್.ಎಸ್. ಕಾಲೇಜು “ಎ” ಗ್ರೇಡ್ ಮಾನ್ಯತೆಗೆ ಪಾತ್ರವಾಗಿದೆ ಎಂಬುದು ಹೆಮ್ಮೆ ಹಾಗೂ ಸಂತೋಷವಾಗಿದೆ ಎಂದರು.
ಇನ್ನು ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಎಂ.ಎಸ್.ಎಪ್.ಎಸ್.ನ ಜನರಲ್ ಮ್ಯಾನೇಜರ್ ಡಾ. ಥಾಮಸ್, ಆನೇಕಲ್ ಕ್ಷೇತ್ರದ ಶಾಸಕ ಬಿ.ಶಿವಣ್ಣ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಜಯಕರ್, ಶೇಖ್ ಲತೀಪ್ ಸೇರಿದಂತೆ ಅನೇಕ ಗಣ್ಯ ಮಾನ್ಯರು ಬಾಗವಹಿಸಲಿದ್ದಾರೆ ಎಂದು ಎಸ್.ಎಪ್.ಎಸ್. ಕಾಲೇಜಿನ ಪ್ರಾಂಶು ಪಾಲರಾದ ಪಾದರ್ ಡಾ. ಬಿನುರವರು ತಿಳಿಸಿದರು.ಇನ್ನು ಸುದ್ದಿಗೋಷ್ಠಿಯಲ್ಲಿ ಎನ್.ಸಿ.ಸಿ.ಕಮಾಂಡರ್ ಚೀಫ್ ಸಂಪತ್ ಕುಮಾರ್ ಸೇರಿದಂತೆ, ಎಸ್.ಎಪ್.ಎಸ್. ಕಾಲೇಜಿನ ಉಪಾನ್ಯಾಸಕರು. ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಬಾಗವಹಿಸಿದ್ದರು.