ಲೋಕಸಭಾ ಕ್ಷೇತ್ರದ ಚುನಾವಣೆಯ ಹೊಸ್ತಿಲಿನಲ್ಲಿ ರಾಜ್ಯಕ್ಕೆ ತ್ರಿಮೂರ್ತಿಗಳ ಆಗಮನವಾಗಲಿದೆ. ಏಪ್ರಿಲ್ 20 ರಂದು ನರೇಂದ್ರ ಮೋದಿ ಅವರ ಆಗಙವಾಗಲಿದ್ದು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ನಗರದಲ್ಲಿ ಸಮಾವೇಶ ಮತ್ತು ರೋಡ್ ಶೋ ನಡೆಸಲಿದ್ದಾರೆ.
ಇನ್ನು ಏಪ್ರಿಲ್ 20 ಮತ್ತು 21 ಅಮಿತ್ ಶಾ ಆಗಮಿಸಲಿದ್ದು, ತುಮಕೂರು, ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರವನ್ನು ಮಾಡಲಿದ್ದಾರೆ. ಏಪ್ರಿಲ್ 24 ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದು, ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.ಈ ಮೂಲಕ ತ್ರಿಮೂರ್ತಿಗಳ ಎಂಟ್ರಿ ಆಗುತ್ತಿದ್ದು, ರಾಜ್ಯದ ಎನ್ಡಿಎ ಅಭ್ಯರ್ಥಿಗಳ ಪ್ರಚಾರ ನಡೆಸಲಿದ್ದಾರೆ.